ನವದೆಹಲಿ (ಪಿಟಿಐ): ‘ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಟಿಸಿಎಸ್, ಕೃತಕ ಬುದ್ಧಿಮತ್ತೆ ಆಧಾರಿತವಾಗಿ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಜಗತ್ತಿನ ಅತಿದೊಡ್ಡ ಕಂಪನಿ ಆಗುವ ಗುರಿಯನ್ನು ಹೊಂದಿದೆ’ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಕೃತಿವಾಸನ್ ಹೇಳಿದ್ದಾರೆ.

2025–26ರ ಆರ್ಥಿಕ ವರ್ಷದ ಕಂಪನಿಯ ವಾರ್ಷಿಕ ವರದಿಯಲ್ಲಿ ಷೇರುದಾರರಿಗೆ ಬರೆದ ಪತ್ರದಲ್ಲಿ, ‘ಕೃತಕ ಬುದ್ಧಿಮತ್ತೆ (ಎ.ಐ) ನೀಡುವ ಅವಕಾಶಗಳನ್ನು ಅರಿತುಕೊಳ್ಳಲು, ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸೇವೆಗಳ ಕಂಪನಿ ಆಗಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದೇವೆ. ಈ ಆಕಾಂಕ್ಷೆಯನ್ನು ಸಾಕಾರಗೊಳಿಸಲು ಮೂಲಸೌಕರ್ಯದಿಂದ ಬುದ್ಧಿಮತ್ತೆಯವರೆಗೆ ಪೂರ್ಣ ಪ್ರಮಾಣದ ಸೇವೆಗಳನ್ನು ಒದಗಿಸುವ ಕಂಪನಿಯಾಗಬೇಕಿದೆ’ ಎಂದು ಕೃತಿವಾಸನ್ ತಿಳಿಸಿದ್ದಾರೆ.

ಕಂಪನಿಯಲ್ಲಿನ ಸಿಬ್ಬಂದಿ ಕೌಶಲವನ್ನು ಹೆಚ್ಚಿಸಲಾಗಿದೆ. 2.70 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳು ಸುಧಾರಿತ ಕೃತಕ ಬುದ್ಧಿಮತ್ತೆ ಕೌಶಲವನ್ನು ಹೊಂದಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಉದ್ಯಮಗಳು ಮಾತ್ರವಲ್ಲದೆ, ರಾಷ್ಟ್ರಮಟ್ಟದ ಯೋಜನೆಗಳನ್ನು ಕಳೆದ ಆರ್ಥಿಕ ವರ್ಷದಲ್ಲಿ ಟಿಸಿಎಸ್ ಕಾರ್ಯಗತ ಗೊಳಿಸಿದೆ. ಸರ್ಕಾರದ ಇ–ಮಾರುಕಟ್ಟೆ ತಾಣ (ಜಿಇಎಂ) ಅನ್ನು ವಿಶ್ವದ ಅತಿದೊಡ್ಡ ಸರ್ಕಾರಿ ಇ-ಕಾಮರ್ಸ್ ಮಾರುಕಟ್ಟೆಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ₹5 ಲಕ್ಷ ಕೋಟಿಗೂ ಅಧಿಕ ಖರೀದಿ ವಹಿವಾಟು ನಡೆಯುತ್ತಿದೆ. ಎಸ್ಬಿಐನ ಯೋನೊ 2.0 ಅನ್ನು ನವೀಕರಣ ಮಾಡಲಾಗಿದ್ದು, 10 ಭಾಷೆಗಳಲ್ಲಿ ಲಭ್ಯವಿದ್ದು, 20 ಕೋಟಿಗೂ ಅಧಿಕ ಬಳಕೆದಾರ ರಿದ್ದಾರೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-104334049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.