ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್ ಸಿಇಒ ಹುದ್ದೆ ತೊರೆದ ರಾಜೇಶ್

Last Updated 16 ಮಾರ್ಚ್ 2023, 16:05 IST
ಅಕ್ಷರ ಗಾತ್ರ

ನವದೆಹಲಿ : ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆಗೆ ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ. ಕಂಪನಿಯು ತನ್ನ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಿಭಾಗದ (ಬಿಎಫ್‌ಎಸ್‌ಐ) ಜಾಗತಿಕ ಮುಖ್ಯಸ್ಥ ಕೆ. ಕೃತಿವಾಸನ್ ಅವರನ್ನು ಸಿಇಒ ಆಗಿ ನಿಯೋಜಿಸಿದೆ.

ಗೋಪಿನಾಥನ್ ಅವರು ಸೆಪ್ಟೆಂಬರ್ 15ರವರೆಗೆ ಟಿಸಿಎಸ್‌ನಲ್ಲಿ ಮುಂದುವರಿಯಲಿದ್ದಾರೆ. ‘ಟಿಸಿಎಸ್‌ನಲ್ಲಿ 22 ವರ್ಷಗಳಿಗೂ ಹೆಚ್ಚಿನ ಅವಧಿಯ ವೃತ್ತಿಜೀವನ ಹಾಗೂ ಕಳೆದ ಆರು ವರ್ಷಗಳಲ್ಲಿ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿಭಾಯಿಸಿದ ನಂತರದಲ್ಲಿ ರಾಜೇಶ್ ಗೋಪಿನಾಥನ್ ಅವರು ಹುದ್ದೆ ತ್ಯಜಿಸಿ ತಮ್ಮ ಇತರ ಆಸಕ್ತಿಗಳನ್ನು ಪೋಷಿಸಿಕೊಳ್ಳಲು ತೀರ್ಮಾನಿಸಿದ್ದಾರೆ’ ಎಂದು ಕಂಪನಿ ಹೇಳಿದೆ.

‘ಟಿಸಿಎಸ್ ಆಡಳಿತ ಮಂಡಳಿಯು ಮಾರ್ಚ್‌ 16ರಿಂದ ಜಾರಿಗೆ ಬರುವಂತೆ ಕೃತಿವಾಸನ್ ಅವರನ್ನು ಸಿಇಒ ಆಗಿ ನಿಯೋಜಿಸಿದೆ. ಅವರನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿ ನೇಮಕ ಮಾಡಲಾಗುತ್ತದೆ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT