ಶನಿವಾರ, ಫೆಬ್ರವರಿ 22, 2020
19 °C
ಹಣಕಾಸು ವರ್ಷದಲ್ಲಿನ ಮೊದಲ ತ್ರೈಮಾಸಿಕ ಫಲಿತಾಂಶ

ಟಿಸಿಎಸ್‌ ನಿವ್ವಳ ಲಾಭ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜೇಶ್‌ ಗೋಪಿನಾಥನ್‌

ಮುಂಬೈ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ಜೂನ್ ಅಂತ್ಯಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ₹7,340 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭವು ₹5,945 ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣವು ಶೇ 23.4ರಷ್ಟು ಏರಿಕೆ ಕಂಡಿದೆ. ಟಾಟಾ ಸಮೂಹದ ಒಟ್ಟಾರೆ ಲಾಭದಲ್ಲಿ ಸಿಂಹಪಾಲು ಹೊಂದಿರುವ ಟಿಸಿಎಸ್‌ನ ವರಮಾನವು, ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ 15.8ರಷ್ಟು ಹೆಚ್ಚಾಗಿ ₹34,261 ಕೋಟಿಗಳಿಗೆ ತಲುಪಿದೆ.

‘ಈ ತ್ರೈಮಾಸಿಕದಲ್ಲಿನ ಹಣಕಾಸು ಸಾಧನೆಯು ಉತ್ತಮ ಆರಂಭ ಕಂಡಿದೆ. ಭವಿಷ್ಯದಲ್ಲಿಯೂ ಇದೇ ಬಗೆಯ ಸಾಧನೆ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಕ್ಲೌಡ್‌ ಟ್ರಾನ್ಸ್‌ಫಾರ್ಮೇಷನ್‌, ಸೈಬರ್‌ ಸುರಕ್ಷತೆ, ದತ್ತಾಂಶ ಸಂರಕ್ಷಣೆ ಮತ್ತು ಆಟೊಮೇಷನ್‌ ಕ್ಷೇತ್ರದಲ್ಲಿ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಸಂಸ್ಥೆಯ ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ.

‘ಶಿಸ್ತಿನ ಕಾರ್ಯನಿರ್ವಹಣೆ, ವಹಿವಾಟು ವೃದ್ಧಿ, ಕರೆನ್ಸಿ ಬೆಂಬಲದಿಂದಾಗಿ ವೇತನ ಹೆಚ್ಚಳದ ಹೊರೆ ನಿಭಾಯಿಸಲು ಸಾಧ್ಯವಾಗಿದೆ’ ಎಂದು ಸಿಎಫ್‌ಒ ವಿ. ರಾಮಕೃಷ್ಣನ್‌ ಹೇಳಿದ್ದಾರೆ.

ಮಧ್ಯಂತರ ಲಾಭಾಂಶ: ₹1 ಮುಖಬೆಲೆಯ ಪ್ರತಿ ಷೇರಿಗೆ ₹4ರಂತೆ ಲಾಭಾಂಶ ಮತ್ತು 1:1 ಬೋನಸ್‌ ಷೇರು ಘೋಷಿಸಲಾಗಿದೆ.

* ಹೊಸ ಹಣಕಾಸು ವರ್ಷಕ್ಕೆ ನಾವು ಉತ್ತಮ ಆರಂಭ ಕಂಡಿದ್ದೇವೆ. ಸಂಸ್ಥೆಯ ಸಾಮರ್ಥ್ಯವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿ ಉತ್ತುಂಗಕ್ಕೆ ತಲುಪಿದೆ

–ರಾಜೇಶ್‌ ಗೋಪಿನಾಥನ್‌, ಟಿಸಿಎಸ್‌ ಸಿಇಒ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು