ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮಾರ್ಚ್ ತ್ರೈಮಾಸಿಕದ ತನ್ನ ಹಣಕಾಸಿನ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ 12.22ರಷ್ಟು ಹೆಚ್ಚಳ ದಾಖಲಿಸಿದೆ.

ಕಂಪನಿಯು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹12,224 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಅದು ₹13,718 ಕೋಟಿಗೆ ತಲುಪಿದೆ. 2025ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ₹10,657 ಕೋಟಿ ಆಗಿತ್ತು.

2025–26ರ ಪೂರ್ತಿ ಹಣಕಾಸು ವರ್ಷದಲ್ಲಿ ಟಿಸಿಎಸ್ನ ನಿವ್ವಳ ಲಾಭವು ಶೇ 1.35ರಷ್ಟು ಹೆಚ್ಚಳ ಕಂಡು, ₹49,210 ಕೋಟಿಗೆ ತಲುಪಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನೌಕರರ ಸಂಖ್ಯೆಯು ನಿವ್ವಳ 2,356ರಷ್ಟು ಹೆಚ್ಚಳ ಕಂಡಿದ್ದು 5.84 ಲಕ್ಷಕ್ಕೆ ತಲುಪಿದೆ.

ಭಾರತದ ಐ.ಟಿ. ಸೇವಾ ವಲಯದ ಉದ್ದಿಮೆಗಳ ಪೈಕಿ ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ ಮೊದಲ ಕಂಪನಿ ಟಿಸಿಎಸ್. ಕೃತಕ ಬುದ್ಧಿಮತ್ತೆ ಕುರಿತ ಚರ್ಚೆಗಳು, ಈ ತಂತ್ರಜ್ಞಾನದಿಂದಾಗಿ ಐ.ಟಿ ಸೇವಾ ವಲಯದ ನೌಕರರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾರ್ಚ್ ತ್ರೈಮಾಸಿಕದಲ್ಲಿ ವ್ಯಾಪಕ ಚರ್ಚೆ ಆಗಿದೆ.

ಮಾರ್ಚ್ ತ್ರೈಮಾಸಿಕದಲ್ಲಿಟಿಸಿಎಸ್ನ ಕಾರ್ಯಾಚರಣೆ ವರಮಾನವು ಶೇ 9.64ರಷ್ಟು ಹೆಚ್ಚಳ ಆಗಿದ್ದು ₹70,698 ಕೋಟಿಗೆ ತಲುಪಿದೆ. 2025–26ನೆಯ ಪೂರ್ತಿ ಹಣಕಾಸು ವರ್ಷದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ಶೇ 4.58ರಷ್ಟು ಜಾಸ್ತಿ ಆಗಿ, ₹2.67 ಲಕ್ಷ ಕೋಟಿಗೆ ತಲುಪಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ಲಾಭದ ಪ್ರಮಾಣವು ಶೇ 25.3ಕ್ಕೆ ಹಿಗ್ಗಿದೆ.

ಕಂಪನಿಯು ಸತತ ಮೂರನೆಯ ತ್ರೈಮಾಸಿಕದಲ್ಲಿಯೂ ಬೆಳವಣಿಗೆ ಸಾಧಿಸಿದೆ ಎಂದು ಟಿಸಿಎಸ್ ಸಿಇಒ ಕೆ. ಕೃತಿವಾಸನ್ ಹೇಳಿದ್ದಾರೆ. ‘ಅರ್ಥ ವ್ಯವಸ್ಥೆಯಲ್ಲಿ ಅಡ್ಡಿಗಳು ಇದ್ದರೂ, ಗ್ರಾಹಕರು ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುವುದು ಸ್ಥಿರವಾಗಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಲಭ್ಯವಾಗುವ ಅವಕಾಶಗಳನ್ನು ಪಡೆಯಲು ನಮಗೆ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಕಂಪನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಪ್ರತಿ ಷೇರಿಗೆ ₹31 ಅಂತಿಮ ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಇದಕ್ಕೆ ಷೇರುದಾರರ ಒಪ್ಪಿಗೆಯ ಅಗತ್ಯವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-1623607713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.