ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್, ರಿಲಯನ್ಸ್ ಅತಿದೊಡ್ಡ ಬ್ರ್ಯಾಂಡ್‌

Published 1 ಜೂನ್ 2023, 16:00 IST
Last Updated 1 ಜೂನ್ 2023, 16:00 IST
ಅಕ್ಷರ ಗಾತ್ರ

ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಭಾರತದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಮತ್ತು ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ಭಾರತದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ಜಾಗತಿಕ ಬ್ರ್ಯಾಂಡ್ ಸಮಾಲೋಚನಾ ಸಂಸ್ಥೆ ಇಂಟರ್‌ಬ್ರ್ಯಾಂಡ್‌ 2023ನೇ ಸಾಲಿನ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ರಿಲಯನ್ಸ್ ಸಮೂಹಕ್ಕೆ ಸೇರಿರುವ ಜಿಯೊ ಕಂಪನಿಯು ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ.

ನಾಲ್ಕನೆಯ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ಇದೆ. ಏರ್‌ಟೆಲ್‌, ಎಲ್‌ಐಸಿ, ಮಹೀಂದ್ರ, ಎಸ್‌ಬಿಐ ಮತ್ತು ಐಸಿಐಸಿಐ ಈ ಪಟ್ಟಿಯಲ್ಲಿ ಇರುವ ಇತರ ಬ್ರ್ಯಾಂಡ್‌ಗಳು. ಈ ವರ್ಷ, ತಂತ್ರಜ್ಞಾನ ಕ್ಷೇತ್ರದ ಮೂರು ಬ್ರ್ಯಾಂಡ್‌ಗಳು ಟಾಪ್ 5ರಲ್ಲಿ ಸ್ಥಾನ ಪಡೆದಿವೆ ಎಂದು ಇಂಟರ್‌ಬ್ರ್ಯಾಂಡ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT