ಬೆಂಗಳೂರು: ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮಾಡುವ ಮೂಲಕ ₹8 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಲಿಮಿಟೆಡ್ ಮುಂದಾಗಿದೆ. ಕಂಪನಿಯು ದೇಶದ ಆರೋಗ್ಯಸೇವಾ ವಲಯದಲ್ಲಿ ಮುಂಚೂಣಿ ಸ್ಥಾನ ಹೊಂದಿದೆ.

ಐಪಿಒ ಕುರಿತ ಕರಡು ದಾಖಲೆಗಳನ್ನು (ಡಿಎಚ್ಆರ್ಪಿ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕಂಪನಿ ಸಲ್ಲಿಸಿದೆ.

ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ 4.32 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಾಗುವುದು. ಪ್ರತಿ ಷೇರಿನ ಮುಖಬೆಲೆ ₹2 ಇರಲಿದೆ. ಈ ಐಪಿಒ ಹಂಚಿಕೆಯಿಂದ ಬರುವ ಬಂಡವಾಳವನ್ನು ಸಾಲ ಮರುಪಾವತಿ, ಮುಂಗಡ ಪಾವತಿ ಮಾಡಲು ಸೇರಿದಂತೆ ಕಂಪನಿಯ ಬೆಳವಣಿಗೆಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ದೇಶದ 14 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಆಸ್ಪತ್ರೆಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.