ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಗ್‌ಕಾಯಿನ್ ಬಳಸಿ ಖರೀದಿಸಿ ಎಂದ ಟೆಸ್ಲಾ

Last Updated 14 ಜನವರಿ 2022, 10:00 IST
ಅಕ್ಷರ ಗಾತ್ರ

ಬೆಂಗಳೂರು: ಟೆಸ್ಲಾ ಕಂಪನಿ ಸರಕು ಖರೀದಿಗೆ ಇನ್ನು ಮುಂದೆ ಗ್ರಾಹಕರು ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿ ಬಳಸಬಹುದು ಎಂದು ಕಂಪನಿ ಹೇಳಿದೆ.

ಟೆಸ್ಲಾ ಸ್ಥಾಪಕ ಎಲೊನ್ ಮಸ್ಕ್ ಅವರು ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಟೆಸ್ಲಾ ಕಂಪನಿಯ ಆನ್‌ಲೈನ್ ಸ್ಟೋರ್‌ನಲ್ಲಿ ಪಾವತಿ ವಿಧಾನ ಇರುವಲ್ಲಿ ಡಾಗ್‌ಕಾಯಿನ್ ಬಳಸಬಹುದಾಗಿದೆ.

ಆದರೆ ಟೆಸ್ಲಾ ಕಾರು ಖರೀದಿಗೆ ಡಾಗ್‌ಕಾಯಿನ್ ಬಳಸುವಂತಿಲ್ಲ. ಅದರ ಬದಲು, ಟೆಸ್ಲಾ ಸ್ಟೋರ್‌ನಲ್ಲಿ ಲಭ್ಯವಿರುವ ಉಡುಪು, ಅಕ್ಸೆಸ್ಸರಿ ಖರೀದಿಗೆ ಬಳಸಬಹುದು.

ಕಳೆದ ವರ್ಷದ ಜೂನ್‌ನಲ್ಲಿ ಕೆಲಸಮಯದ ಅವಧಿಗೆ ಟೆಸ್ಲಾ ಗ್ರಾಹಕರಿಗೆ ಬಿಟ್‌ಕಾಯಿನ್ ಬಳಸಿ ಕಾರು ಖರೀದಿಸುವ ಅವಕಾಶ ಕಲ್ಪಿಸಿತ್ತು. ಆದರೆ ನಂತರದಲ್ಲಿ ಬಿಟ್‌ಕಾಯಿನ್ ಪಾವತಿ ವಿಧಾನವನ್ನು ರದ್ದುಪಡಿಸಿತ್ತು.

ಪ್ರಸ್ತುತ ಮಾರುಕಟ್ಟೆ ದರದಲ್ಲಿ ದೇಶದಲ್ಲಿ ಒಂದು ಡಾಗ್‌ಕಾಯಿನ್ ಬೆಲೆ ₹14.76 ಲಕ್ಷ ಇದ್ದರೆ, ಬಿಟ್‌ಕಾಯಿನ್ ಮೌಲ್ಯ ₹31,80,283 ಇದೆ. ಆದರೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಬಳಕೆಗೆ ಅಧಿಕೃತ ಮಾನ್ಯತೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT