ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಥರ್ಡ್‌ಪಾರ್ಟಿ ವಿಮೆ ಹೆಚ್ಚಳ?

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವ
Last Updated 20 ಮೇ 2019, 18:44 IST
ಅಕ್ಷರ ಗಾತ್ರ

ನವದೆಹಲಿ: ಕಾರ್‌, ದ್ವಿಚಕ್ರ ವಾಹನ ಮತ್ತು ಸಾರಿಗೆ ವಾಹನಗಳ ಥರ್ಡ್‌ಪಾರ್ಟಿ (ಟಿಪಿ) ವಿಮೆಯ ಕಂತಿನ ಹಣವನ್ನು ಹೆಚ್ಚಿಸಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಉದ್ದೇಶಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಈ ಏರಿಕೆ ಜಾರಿಗೆ ಬರಲಿದೆ. ಎಂಜಿನ್‌ ಸಾಮರ್ಥ್ಯ 1,000 ಸಿಸಿಗಿಂತ ಕಡಿಮೆ ಇರುವ ಕಾರ್‌ಗಳ ‘ಟಿಪಿ’ ವಿಮೆ ಕಂತನ್ನು ಸದ್ಯದ ₹ 1,850 ರಿಂದ ₹ 2,120ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

1,000 ಸಿಸಿನಿಂದ 1,500 ಸಿಸಿವರೆಗಿನ ಕಾರ್‌ಗಳ ಕಂತು ₹ 2,863 ರಿಂದ ₹ 3,300ಕ್ಕೆ ಹೆಚ್ಚಿಸಲಾಗುವುದು. 1,500 ಸಿಸಿಗಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯದ ವಿಲಾಸಿ ಕಾರ್‌ಗಳ ₹ 7,890 ‘ಟಿಪಿ’ಯಲ್ಲಿ ಯಥಾಸ್ಥಿತಿ ಇರಲಿದೆ.

ಸಾಮಾನ್ಯವಾಗಿ ‘ಟಿಪಿ’ ದರಗಳನ್ನು ಏಪ್ರಿಲ್‌ 1ರಿಂದ ಪರಿಷ್ಕರಿಸಲಾಗುತ್ತದೆ. ಈ ಬಾರಿ ಹೊಸ ದರಗಳನ್ನು ಪರಿಷ್ಕರಿಸುವವರೆಗೆ ಹಳೆಯ ದರ ಮುಂದುವರೆಸಲು ಪ್ರಾಧಿಕಾರ ನಿರ್ಧರಿಸಿದೆ. ಈಗ ದರ ಪರಿಷ್ಕರಣೆಯ ಕರಡು ನೀತಿ ರೂಪಿಸಿದೆ. ಈ ತಿಂಗಳ 29ರವರೆಗೆ ಈ ಬಗ್ಗೆ ಜನರ ಅಭಿಪ್ರಾಯಕ್ಕೆ ಆಹ್ವಾನಿಸಿದೆ.

ದ್ವಿಚಕ್ರ ವಾಹನ: 77 ಸಿಸಿಗಿಂತ ಕಡಿಮೆ ಇರುವ ದ್ವಿಚಕ್ರ ವಾಹನಗಳ ‘ಟಿಪಿ’ಯನ್ನು ಸದ್ಯದ ₹ 427 ರಿಂದ ₹ 482ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. 75 ಸಿಸಿ ಮತ್ತು 350 ಸಿಸಿ ನಡುವಣ ಬೈಕ್‌ಗಳ ‘ಟಿಪಿ’ ದರ ಹೆಚ್ಚಿಸಲಾಗುವುದು. 350 ಸಿಸಿಗಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯದ ಬೈಕ್‌ಗಳ ‘ಟಿಪಿ’ ದರ ಹೆಚ್ಚಿಸದಿರಲು ನಿರ್ಧರಿಸಲಾಗಿದೆ.

ಹೊಸ ಕಾರ್‌ಗಳಿಗೆ 3 ವರ್ಷಗಳವರೆಗಿನ ಅವಧಿಗೆ ಮತ್ತು ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷಗಳವರೆಗೆ ಒಂದು ಬಾರಿಗೆ ಪಾವತಿಸುವ ‘ಟಿಪಿ’ ಕಂತಿನಲ್ಲಿ ಬದಲಾವಣೆ ಮಾಡಲಾಗಿಲ್ಲ.

ರಿಯಾಯ್ತಿ: ವಿದ್ಯುತ್‌ ಚಾಲಿತ ಖಾಸಗಿ ಕಾರ್‌ ಮತ್ತು ದ್ವಿಚಕ್ರ ವಾಹನಗಳ ಮೋಟರ್‌ ‘ಟಿಪಿ’ ಕಂತಿನಲ್ಲಿ ಶೇ 15ರಷ್ಟು ರಿಯಾಯ್ತಿ ನೀಡಲು ಪ್ರಾಧಿಕಾರವು ಉದ್ದೇಶಿಸಿದೆ.

ಇ–ರಿಕ್ಷಾಗಳ ‘ಟಿಪಿ’ ಕಂತು ಹೆಚ್ಚಿಸದಿರಲು ನಿರ್ಧರಿಸಿದೆ. ಶಾಲಾ ಬಸ್‌ಗಳ ದರ ಹೆಚ್ಚಳಗೊಳ್ಳಲಿದೆ. ಟ್ಯಾಕ್ಸಿ, ಬಸ್‌ ಮತ್ತು ಲಾರಿಗಳ ವಿಮೆ ಕಂತಿನ ದರವೂ ಏರಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT