ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್ಸನ್‌ನಿಂದ ಆಂಡ್ರಾಯ್ಡ್‌ ಟಿ.ವಿ

Last Updated 16 ಜೂನ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯುನ್ನತ ಟಿ.ವಿ ತಂತ್ರಜ್ಞಾನ ಗ್ರಾಹಕರಿಗೆ ತಲುಪಿಸುವ ದಿಸೆಯಲ್ಲಿ ಥಾಮ್ಸನ್‌ ಕಂಪನಿಯು ಗೂಗಲ್‌ ಆಂಡ್ರಾಯ್ಡ್‌ ಟಿ.ವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಭಾರತದಲ್ಲಿಯೇ ತಯಾರಿಸಿ’ ಯೋಜನೆಯಡಿ ಥಾಮ್ಸನ್‌ ಟಿ.ವಿಗಳನ್ನು ಭಾರತದಲ್ಲೇ ತಯಾರಿಸಲಾಗಿದೆ. ಸೂಪರ್‌ ಪ್ಲಾಸ್ಟ್ರಾನಿಕ್‌ ಕಂಪನಿಯು ಈ ಟಿ.ವಿಗ‌ಳನ್ನು ತಯಾರಿಸುತ್ತಿದೆ. ಈ ಟಿವಿಗಳಲ್ಲಿ ಮೊಬೈಲ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಸಾಧ್ಯತೆಗೆ ಗೂಗಲ್‌ ಕಾರಣವಾಗಿದೆ ಎಂದು ಕಂಪನಿಯ ಸಿಇಒ ಅವನೀತ್‌ ಸಿಂಗ್‌ ಮಾರ್ವಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘65, 43, 49 ಮತ್ತು 55 ಇಂಚುಗಳಲ್ಲಿ ಟಿ.ವಿಗಳು ಲಭ್ಯ ಇವೆ. ₹30 ಸಾವಿರದಿಂದ 60 ಸಾವಿರವರೆಗೆ ಬೆಲೆ ಹೊಂದಿವೆ.ಆಂಡ್ರಾಯ್ಡ್‌ ಒರಿಯೊ 8.1 ತಂತ್ರಜ್ಞಾನ ಎಲ್ಲಟಿ.ವಿಯಲ್ಲೂ ಸಿಗಲಿದೆ. ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಸಹಯೋಗದಲ್ಲಿ ಟಿವಿಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದರು.ಫ್ಲಿಪ್‌ಕಾರ್ಟ್‌ನ ಹಿರಿಯ ಉಪಾಧ್ಯಕ್ಷ ಅಜಯ್‌ ಯಾದವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT