ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮಾಟೊದಲ್ಲಿನ ಶೇ 2.34ರಷ್ಟು ಷೇರು ಮಾರಿದ ಟೈಗರ್‌ ಗ್ಲೋಬಲ್‌

Last Updated 4 ಆಗಸ್ಟ್ 2022, 10:43 IST
ಅಕ್ಷರ ಗಾತ್ರ

ನವದೆಹಲಿ: ಟೈಗರ್‌ ಗ್ಲೋಬಲ್‌ ಕಂಪನಿಯು ಜೊಮಾಟೊದಲ್ಲಿ ಹೊಂದಿದ್ದ ಷೇರುಗಳಲ್ಲಿ ಶೇ 2.34ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

18.45 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಟೈಗರ್ ಗ್ಲೋಬಲ್‌ ಕಂಪನಿಯು ಜೊಮಾಟೊದಲ್ಲಿನ ತನ್ನ ಷೇರುಪಾಲನ್ನು ಶೇ 2.77ಕ್ಕೆ ತಗ್ಗಿಸಿಕೊಂಡಿದೆ ಎಂದು ಜೊಮಾಟೊ ಗುರುವಾರ ತಿಳಿಸಿದೆ.

ಜುಲೈ 25 ರಿಂದ ಆಗಸ್ಟ್‌ 2ರ ನಡುವಿನ ಅವಧಿಯಲ್ಲಿ ಷೇರುಗಳನ್ನು ಮಾರಾಟ ಮಾಡಲಾಗಿದೆ ಎಂದು ಜೊಮಾಟೊ ಷೇರುಪೇಟೆಗೆ ಮಾಹಿತಿ ನೀಡಿದೆ.

ಉಬರ್‌ ಕಂಪನಿಯು ಬುಧವಾರ ಜೊಮಾಟೊದಲ್ಲಿ ಹೊಂದಿದ್ದ 61.2 ಕೋಟಿ ಷೇರುಗಳನ್ನು ₹ 3,088 ಕೋಟಿಗೆ ಮಾರಾಟ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT