ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈರ್‌ ತಯಾರಿಕೆ ಉದ್ಯಮ ಕೋವಿಡ್‌ ನಂತರ ಪ್ರಗತಿ: ಸಿಎಂಡಿ ಡಾ.ರಘುಪತಿ ಸಿಂಘಾನಿಯಾ

ಸಿಎಂಡಿ ಡಾ.ರಘುಪತಿ ಸಿಂಘಾನಿಯಾ
Last Updated 2 ಡಿಸೆಂಬರ್ 2022, 17:23 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ ನಂತರ ಟೈರ್‌ ತಯಾರಿಕೆ ಉದ್ಯಮ ನಿರೀಕ್ಷೆಗಿಂತಲೂ ಉತ್ತಮ ಪ್ರಗತಿ ಕಂಡಿದೆ’ ಎಂದು ಜೆಕೆ ಟೈರ್‌ ಮತ್ತು ಇಂಡಸ್ಟ್ರೀಸ್‌ ಲಿಮಿ ಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ ತಿಳಿಸಿದರು.

ಕೆಆರ್‌ಎಸ್‌ ರಸ್ತೆಯಲ್ಲಿರುವ ಜೆಕೆ ಟೈರ್‌ ‘ವಿಕ್ರಾಂತ’ ಘಟಕದಲ್ಲಿ ಶುಕ್ರವಾರ ನಡೆದ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋವಿಡ್‌ ನಂತರವು ಬೇಡಿಕೆ, ಪೂರೈಕೆ ಹಾಗೂ ಲಾಭಾಂಶದಲ್ಲಿ ಪ್ರಗತಿ ದಾಖಲಿಸಿದೆ. ಉದ್ಯಮವು ಆರೋಗ್ಯಕರ ಬೆಳವಣಿಗೆ ದಾಖಲಿಸಿದೆ’ ಎಂದರು.

‘ಉದ್ಯಮಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಅಗತ್ಯಾನುಸಾರ ಶೇ 30ರವರೆಗೂ ಆಮದು ಮಾಡಿ
ಕೊಳ್ಳಲಾಗುತ್ತಿದೆ. ದೇಶದ ಹವಾಮಾನಕ್ಕೆ ಪೂರಕವಾದ, ಅಧಿಕ ಮೈಲೇಜ್‌, ಪುನರ್‌ ಬಳಕೆ ಆಗುವಂತಹ ಟೈರ್‌ಗಳ ಉತ್ಪಾದನೆಗೆ ಕಂಪನಿ ಹೆಚ್ಚಿನ ಒತ್ತು ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT