ಸೋಮವಾರ, ಅಕ್ಟೋಬರ್ 21, 2019
21 °C

ದೆಹಲಿಯಲ್ಲಿ ಕೆ.ಜಿ. ಟೊಮೆಟೊಗೆ ₹80

Published:
Updated:

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ತರಕಾರಿಗಳ ಬೆಲೆ ಏರಿಕೆ ಸರದಿಯಲ್ಲಿ ಈರುಳ್ಳಿ ಬಳಿಕ ಇದೀಗ ಟೊಮೆಟೊ ಬಂದಿದೆ. ಬುಧವಾರ ಪ್ರತಿ ಕೆ.ಜಿ ಬೆಲೆ ₹ 80ಕ್ಕೆ ತಲುಪಿದೆ.

ಕರ್ನಾಟಕವನ್ನೂ ಒಳಗೊಂಡು ಟೊಮೆಟೊ ಬೆಳೆಯುವ ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದರಿಂದ ಪೂರೈಕೆಯಲ್ಲಿ ಕೊರತೆ ಆಗಿದೆ. ಇದರಿಂದಾಗಿ ಕೆಲವು ದಿನಗಳಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಆಜಾದ್‌ ಪುರ ಮಂಡಿಯ ಸಗಟು ವರ್ತಕರೊಬ್ಬರು ಹೇಳಿದ್ದಾರೆ.

ಸಫಲ್‌ ಮಳಿಗೆಗಳಲ್ಲಿ ಕೆ.ಜಿಗೆ ₹ 58ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಥಳೀಯ ವ್ಯಾಪಾರಿಗಳು ಗುಣಮಟ್ಟದ ಆಧಾರದ ಮೇಲೆ ಕೆ.ಜಿಗೆ ₹ 60 ರಿಂದ ₹ 80ರವರೆಗೂ ಮಾರಾಟ ಮಾಡುತ್ತಿದ್ದಾರೆ.

Post Comments (+)