ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಬನ್ ಕ್ರೂಸರ್‌ ಹೈರೈಡರ್ ಅನಾವರಣ ಮಾಡಿದ ಟೊಯೊಟ

Last Updated 1 ಜುಲೈ 2022, 15:54 IST
ಅಕ್ಷರ ಗಾತ್ರ

ನವದೆಹಲಿ: ಟೊಯೊಟ ಕಿರ್ಲೋಸ್ಕರ್ ಮೋಟರ್ ಕಂಪನಿಯು ‘ಅರ್ಬನ್ ಕ್ರೂಸರ್ ಹೈರೈಡರ್’ ಅನಾವರಣ ಮಾಡಿದ್ದು, ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿದೆ.

ಮುಂಬರುವ ಹಬ್ಬಗಳ ಋತುವಿನಲ್ಲಿ ಈ ವಾಹನವು ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದು ಹುಂಡೈ ಕ್ರೇಟಾ, ಕಿಯಾ ಸೆಲ್ಟೊಸ್‌ನಂತಹ ವಾಹನಗಳ ಜೊತೆ ಪೈಪೋಟಿಗೆ ಇಳಿಯಲಿದೆ ಎನ್ನಲಾಗಿದೆ.

₹ 25 ಸಾವಿರ ‍ಪಾವತಿಸಿ ಅರ್ಬನ್ ಕ್ರೂಸರ್ ಹೈರೈಡರ್ ವಾಹನ ಬುಕ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದು ನಿಯೊ ಡ್ರೈವರ್ ಹಾಗೂ ಸ್ವಯಂ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ನಿಯೊ ಡ್ರೈವ್‌ ಮಾದರಿಯು 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಸ್ವಯಂ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್‌ ಮಾದರಿಯಲ್ಲಿ 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇದರಲ್ಲಿದೆ.

ಸನ್‌ರೂಫ್‌, ವೈರ್‌ಲೆಸ್‌ ಚಾರ್ಜರ್, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ವಾಹನದಲ್ಲಿ ಇರಲಿವೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT