ಷೇರುಪೇಟೆ ಹೂಡಿಕೆ ಉತ್ಪನ್ನಕ್ಕಿಂತಲೂ, ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳತ್ತ ನಗರ ಮತ್ತು ಗ್ರಾಮೀಣ ಭಾಗದ ಕುಟುಂಬಗಳಿಗೆ ಹೆಚ್ಚಿನ ಒಲವಿದೆ.

ಷೇರುಪೇಟೆಯ ಒಂದಾದರೂ ಹೂಡಿಕೆ ಉತ್ಪನ್ನದ ಬಗ್ಗೆ ದೇಶದಲ್ಲಿನ ಶೇ 63ರಷ್ಟು ಕುಟುಂಬಗಳಿಗೆ ಅರಿವು ಇದೆ. ಈ ಪೈಕಿ ನಗರ ಪ್ರದೇಶದಲ್ಲಿನ ಶೇ 74ರಷ್ಟು ಕುಟುಂಬಗಳಿಗೆ ಅರಿವು ಇದ್ದರೆ, ಗ್ರಾಮೀಣ ಭಾಗದಲ್ಲಿನ ಶೇ 56ರಷ್ಟು ಕುಟುಂಬಗಳಿಗೆ ಮಾತ್ರ ಮಾಹಿತಿ ಇದೆ.

ಆದರೆ, ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ನಿಶ್ಚಿತ ಠೇವಣಿ, ಆರ್.ಡಿ ಬಗ್ಗೆ ಒಟ್ಟಾರೆ ಶೇ 98ರಷ್ಟು ಕುಟುಂಬಗಳಿಗೆ ತಿಳಿದಿದೆ. ಈ ಪೈಕಿ ನಗರ ಪ್ರದೇಶದಲ್ಲಿನ ಕುಟುಂಬಗಳಿಗೆ ಶೇ 99ರಷ್ಟು ಮತ್ತು ಗ್ರಾಮೀಣ ಭಾಗದ ಶೇ 98ರಷ್ಟು ಕುಟುಂಬಗಳಿಗೆ ಅರಿವು ಇದೆ.

ನಗರ ಪ್ರದೇಶದಲ್ಲಿನ ಕುಟುಂಬಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ ಅಂಚೆ ಕಚೇರಿಯ ಉಳಿತಾಯ ಖಾತೆ, ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಬಗ್ಗೆ ಹೆಚ್ಚಿನ ಒಲವಿದೆ.

ಕರ್ನಾಟಕಕ್ಕೆ ಎರಡನೇ ಸ್ಥಾನ: ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿನ ಶೇ 72ರಷ್ಟು ಕುಟುಂಬಗಳಿಗೆ ಷೇರುಪೇಟೆಯ ಉತ್ಪನ್ನದ ಬಗ್ಗೆ ಅರಿವಿದ್ದು, ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಶೇ 76ರಷ್ಟಿದೆ. ಕೇರಳದಲ್ಲಿ ಶೇ 69, ತೆಲಂಗಾಣ ಶೇ 68 ಮತ್ತು ಆಂಧ್ರ ಪ್ರದೇಶದಲ್ಲಿ ಶೇ 50ರಷ್ಟಿದೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢದಲ್ಲಿನ ಶೇ 100ರಷ್ಟು ಕುಟುಂಬಗಳಿಗೆ ಅರಿವು ಇದೆ. ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಶೇ 78ರಷ್ಟು ಇದ್ದು, ಅಗ್ರಸ್ಥಾನದಲ್ಲಿದೆ. ನಾಗಲ್ಯಾಂಡ್ನಲ್ಲಿ ಅತಿ ಕಡಿಮೆ ಶೇ 35ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.