ಶನಿವಾರ, ಆಗಸ್ಟ್ 13, 2022
24 °C

ವೊಡಾಫೋನ್‌ ವಿರುದ್ಧದ ಪ್ರಕರಣ ಕೈಬಿಟ್ಟ ಟ್ರಾಯ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೊಡಾಫೋನ್‌ ಐಡಿಯಾ ಕಂಪನಿಯು ಪರಿಷ್ಕೃತ ರೆಡ್‌–ಎಕ್ಸ್‌ ಯೋಜನೆ ಜಾರಿಗೊಳಿಸಿದೆ. ಹೀಗಾಗಿ ಆದ್ಯತಾ ಯೋಜನೆಗೆ ಸಂಬಂಧಿಸಿದಂತೆ ಕಂಪನಿ ವಿರುದ್ಧದ ಪ್ರಕರಣವನ್ನು ಕೈಬಿಡಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನಿರ್ಧರಿಸಿದೆ.

‘ರೆಡ್‌–ಎಕ್ಸ್‌’ ಆದ್ಯತಾ ಯೋಜನೆಯ ‌ವಿಚಾರವಾಗಿ ಟ್ರಾಯ್‌ ಆಗಸ್ಟ್‌ನಲ್ಲಿ ಕಂಪನಿಗೆ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಯೋಜನೆಯಲ್ಲಿ ‘ಪಾರದರ್ಶಕತೆಯ ಕೊರತೆ ಇದೆ’, ‘ಇದು ತಪ್ಪುದಾರಿಗೆ ಎಳೆಯುವಂಥದ್ದು’ ಎಂದು ಟ್ರಾಯ್ ಹೇಳಿತ್ತು.

ಆ ಬಳಿಕ ಕಂಪನಿಯು ಪರಿಷ್ಕೃತ ಯೋಜನೆ ಜಾರಿಗೊಳಿಸಿದ್ದು, ಅದರಲ್ಲಿ ‘ಆದ್ಯತೆಯ ಮೇರೆಗೆ ಅತ್ಯಂತ ವೇಗದ 4ಜಿ ನೆಟ್‌ವರ್ಕ್‌ ವೈಶಿಷ್ಟ್ಯ’ ಎನ್ನುವ ಹೇಳಿಕೆಯನ್ನು ಕೈಬಿಟ್ಟಿರುವುದಾಗಿ ಟ್ರಾಯ್‌ಗೆ ಬರೆದಿರುವ ಪತ್ರದಲ್ಲಿ ವೊಡಾಫೋನ್‌ ಐಡಿಯಾ ಕಂಪನಿ ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿದೆ.

ವಿವಾದಾಸ್ಪದ ಹೇಳಿಕೆ ಮತ್ತು ಹಿಂದಿನ ಯೋಜನೆ ಕೈಬಿಟ್ಟಿರುವುದರಿಂದ ತನಿಖೆ ಅಥವಾ ಹೆಚ್ಚಿನ ವಿಚಾರಣೆ ನಡೆಸದೇ ಇರಲು ಪ್ರಾಧಿಕಾರ ನಿರ್ಧರಿಸಿದೆ ಎಂದು ಕಂಪನಿಗೆ 'ಟ್ರಾಯ್' ತಿಳಿಸಿದೆ.

ಪ್ಲಾಟಿನಮ್ ಯೋಜನೆಯನ್ನು ತಡೆಹಿಡಿಯುವಂತೆ ಏರ್‌ಟೆಲ್‌ಗೆ ಟ್ರಾಯ್‌ ಸೂಚಿಸಿತ್ತು. ಆದರೆ, ಯಾವುದೇ ಷೋಕಾಸ್‌ ನೋಟಿಸ್‌ ನೀಡಿರಲಿಲ್ಲ. ಹೀಗಿದ್ದರೂ ಏರ್‌ಟೆಲ್‌ ತನ್ನ ಪ್ಲಾಟಿನಂ ಯೋಜನೆಯನ್ನು ಹಿಂಪಡೆದು, ಟ್ರಾಯ್‌ ಸೂಚನೆಗೆ ಅನುಸಾರವಾಗಿ ಪರಿಷ್ಕೃತ ಯೋಜನೆಯನ್ನು ನೀಡಿದೆ. ಹಾಗಾಗಿ ಏರ್‌ಟೆಲ್‌ ವಿರುದ್ಧ ಟ್ರಾಯ್‌ ಯಾವುದೇ ತನಿಖೆಗೆ ಮುಂದಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು