ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ವಿಮೆ ಯೋಜನೆಯ ಪ್ರಯೋಜನ

Last Updated 22 ಜನವರಿ 2019, 19:45 IST
ಅಕ್ಷರ ಗಾತ್ರ

ಪ್ರವಾಸವು ಶಿಕ್ಷಣ, ಉದ್ದಿಮೆ ಹಾಗೂ ವೈಯಕ್ತಿಕ ಜೀವನದ ಅಂಗಭಾಗವಾಗಿಟ್ಟಿದೆ. 2020ರ ವೇಳೆಗೆ ಭಾರತದ ವಿದೇಶ ಪ್ರಯಾಣ ಮಾರುಕಟ್ಟೆಯು ₹ 28 ಸಾವಿರ ಕೋಟಿಗೂ ಮೀರಿ ಬೆಳೆಯಲಿದೆ.

ವಿಶ್ವ ಪರ್ಯಟನೆ ಹೆಚ್ಚುತ್ತಿದ್ದಂತೆ ಪ್ರವಾಸಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನೂ ಪ್ರವಾಸಿಗರು ಎದುರಿಸಬೇಕಾಗುತ್ತದೆ. ಪಾಸ್‌ಪೋರ್ಟ್ ಕಳೆದು ಹೋಗುವುದು, ವಿಮಾನ ವಿಳಂಬ ಅಥವಾ ಕೈತಪ್ಪುವುದು, ಬ್ಯಾಗ್ ಕಾಣೆಯಾಗುವುದು,ಪ್ರವಾಸ ರದ್ದಾಗುವುದು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗುತ್ತವೆ. ಯೋಗ್ಯ ವಿಮೆ ಹೊಂದಿಲ್ಲದಿದ್ದರೆ, ಇವುಗಳಲ್ಲಿ ಪ್ರತಿಯೊಂದೂ ಪ್ರಯಾಣಿಕರಿಗೆ ಭಾರಿ ನಷ್ಟ ತಂದೊಡ್ಡುತ್ತವೆ. ಈ ನಷ್ಟ ಕೆಲವು ಸಾವಿರ ರೂಪಾಯಿಗಳಿಂದ ಲಕ್ಷ ರೂಪಾಯಿಗಳವರೆಗೂ ಆಗಬಹುದು.

ಪ್ರವಾಸವ ವಿಮೆ ಸೌಲಭ್ಯವು, ನೆಮ್ಮದಿಯಿಂದ ಪ್ರವಾಸ ಮಾಡಲು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ನೆರವು ಪಡೆಯಲು ಪ್ರತಿಯೊಬ್ಬರಿಗೂ ನೆರವಿಗೆ ಬರುತ್ತದೆ. ಇತ್ತೀಚೆಗೆ ವಿಮೆ ಕಂಪನಿಗಳು ವೈದ್ಯಕೀಯ ಹಾಗೂ ವೈದ್ಯಕೀಯಯೇತರ ವೈಯಕ್ತಿಕ ನೆಲೆಯಲ್ಲಿನ ಆಕಸ್ಮಿಕಗಳಿಗೂ ಮೀರಿ, ನೈಸರ್ಗಿಕ ದುರ್ಘಟನೆಗಳು ಮತ್ತು ಭಯೋತ್ಪಾದಕ ದಾಳಿ ಸೇರಿದಂತೆ ಊಹಿಸಲಿಕ್ಕಾಗದ ದುರ್ಘಟನೆಗಳಿಗೆ ತಮ್ಮ ಸೇವೆ ವಿಸ್ತರಿಸಿವೆ. 24 ಗಂಟೆಗಳ ವೈದ್ಯಕೀಯ ಸೇವೆಗಳನ್ನೂ ಆರಂಭಿಸಿವೆ. ಪ್ರವಾಸ ಸಂದರ್ಭದಲ್ಲಿ ಏನೆಲ್ಲಾ ಅನಿರೀಕ್ಷಿತಗಳು ಘಟಿಸಬಹುದೋ ಅದಕ್ಕೆಲ್ಲಾ ಆರ್ಥಿಕ ನೆಮ್ಮದಿ ಪಡೆಯಲು ಪ್ರವಾಸಿಗರು ವಿಮೆ ಸೌಲಭ್ಯ ಪಡೆಯುವುದು ತುಂಬ ಮುಖ್ಯವಾಗಿದೆ.

ಅಧ್ಯಯನಗಳ ಅನುಸಾರ ಶೇ 90ರಷ್ಟು ಪ್ರವಾಸಿಗರಿಗೆ ಇಂತಹ ವಿಮೆ ಸೌಲಭ್ಯದ ಬಗ್ಗೆ ತಿಳಿದಿರುತ್ತದೆ. ಆದರೆ, ಕೇವಲ ಶೇ 40ರಷ್ಟು ಮಾತ್ರ ವಿಮೆ ಖರೀದಿಸುತ್ತಾರೆ ಇದಕ್ಕಾಗಿ ಹೆಚ್ಚುವರಿ ವೆಚ್ಚ ಅಗತ್ಯವೇ ಎಂಬ ತುಮುಲವೇ ಇದಕ್ಕೆ ಕಾರಣ. 2016ರಲ್ಲಿ, ಜಗತ್ತಿನಾದ್ಯಂತ ಏರ್‌ಲೈನ್ಸ್‌ಗಳಿಂದಾಗಿ 2 ಕೋಟಿ ಬ್ಯಾಗೇಜ್‌ಗಳು ಕಾಣೆಯಾಗಿವೆ ಅಥವಾ ತಾತ್ಕಾಲಿಕವಾಗಿ ತಪ್ಪು ಸ್ಥಳ ತಲುಪಿವೆ. ಪ್ರವಾಸದ ಸಮಯದಲ್ಲಿ ಲಗೇಜ್‌ ಕಳೆದುಕೊಳ್ಳುವುದು ಅಂದರೆ, ಅಗತ್ಯದ ವಸ್ತುಗಳು, ಬಟ್ಟೆ ಬರೆ, ಔಷಧಿಗಳು ಮತ್ತು ಇನ್ನೂ ಹಲವಾರು ವಸ್ತುಗಳನ್ನು ಪುನಃ ಖರೀದಿಸಲು ಹೊಸದಾಗಿ ಖರ್ಚು ಮಾಡಬೇಕಾಗುತ್ತದೆ.

ವಿಮಾನ ವಿಳಂಬ ಮತ್ತು ರದ್ದಾಗುವಿಕೆಯು ಸಾಮಾನ್ಯ ಘಟನೆಯಾಗಿದ್ದು ಪ್ರಯಾಣಿಕರ ಅನನುಕೂಲತೆಗೆ ಕಾರಣವಾಗುತ್ತವೆ. ಇದರಿಂದ ಇನ್ನೊಂದು ನಗರಕ್ಕೆ ಹೋಗಬೇಕಾದ ವಿಮಾನ ತಪ್ಪಿ ಹೋಗುತ್ತದೆ. ಇದರಿಂದಾಗಿ ವಸತಿ ಹಾಗೂ ಊಟ-ತಿಂಡಿಗಾಗಿ ಹೆಚ್ಚಿನ ವೆಚ್ಚ ಮಾಡಬೇಕಾಗುತ್ತದೆ. ಕಳೆದು ಹೋದ ಲಗೇಜ್‌ಗಾಗಿ ₹ 77,000 ಮತ್ತು ವಿಳಂಬ ಹಾಗೂ ರದ್ದುಪಡಿಸಲಾದ ವಿಮಾನಗಳಿಗಾಗಿ ₹ 1.12 ಲಕ್ಷ ನೀಡುವ ವಿಮೆ ಸೌಲಭ್ಯ ಒದಗಿಸುವ ಯೋಜನೆಗಳು ಎಲ್ಲಾ ನಷ್ಟಗಳನ್ನು ತುಂಬಿಕೊಡಲಿವೆ.

ಆರೋಗ್ಯ ವಿಮೆ ಹೊಂದಿರುವವರು ತಮಗೆ ಪ್ರವಾಸಿ ವಿಮೆಯ ಅಗತ್ಯವಿಲ್ಲ. ಪ್ರಯಾಣದ ಸಮಯದಲ್ಲೂ ಈ ವಿಮೆಯು ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ನಂಬಿರುತ್ತಾರೆ. ಆದರೆ ನಿರ್ದಿಷ್ಟವಾಗಿ ಸೂಚಿಸದೇ ಇದ್ದಲ್ಲಿ, ಇಂತಹ ವಿಮೆ ಸೌಲಭ್ಯವು ಸಾಮಾನ್ಯವಾಗಿ ದೇಶದಲ್ಲಿರುವಾಗ ಮಾತ್ರ ಅನ್ವಯವಾಗುತ್ತದೆ. ವಿದೇಶಗಳಲ್ಲಿ ವೈದ್ಯಕೀಯ ವೆಚ್ಚ ತುಂಬಾ ದುಬಾರಿಯಾಗಿರುತ್ತದೆ.

ಶಸ್ತ್ರಚಿಕಿತ್ಸೆ ಮತ್ತು ನಿಧಾನವಾಗಿ ಗುಣಮುಖವಾಗುವುದಕ್ಕೆ ಲಕ್ಷಾಂತರ ರೂಪಾಯಿಗಳ ವೆಚ್ಚವನ್ನು ಆರೋಗ್ಯ ವಿಮೆಯಿಂದ ಭರಿಸಲು ಸಾಧ್ಯವಾಗುವುದಿಲ್ಲ. ಪ್ರವಾಸ ವಿಮೆ ಸೌಲಭ್ಯವು ಪ್ರವಾಸ ಸಂದರ್ಭದಲ್ಲಿನ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ. ಕೆಲ ಪಾಲಿಸಿಗಳು₹ 69 ಲಕ್ಷದಿಂದ ₹ 1.38 ಕೋಟಿವರೆಗಿನ ವೈದ್ಯಕೀಯ ಲಾಭಗಳನ್ನು ಒದಗಿಸುತ್ತವೆ. ಜತೆಗೆ 24 ಗಂಟೆಗಳ ನೆರವನ್ನೂ ಒದಗಿಸುತ್ತವೆ.

ಹೊಸ ತಲೆಮಾರಿನ ಶೇ 38ರಷ್ಟು ಜನರು ಪ್ರವಾಸಿ ವಿಮೆಯ ಅಗತ್ಯವ ಇಲ್ಲವೆಂದು ನಂಬುತ್ತಾರೆ. ಕೆಲವು ದೇಶಗಳಲ್ಲಿ ವೀಸಾ ಪಡೆಯಲು ಕಡ್ಡಾಯವಾಗಿರುವ ಕಾರಣಕ್ಕೆ ಇದನ್ನು ಖರೀದಿಸುತ್ತಾರೆ. ಹತ್ತಾರು ಸೌಲಭ್ಯಗಳು ಇರುವುದರಿಂದ ಪ್ರಯಾಣಿಕರು ಪ್ರವಾಸಿ ವಿಮೆಯನ್ನು ಒಂದು ಅನಗತ್ಯ ವೆಚ್ಚ ಎನ್ನುವುದನ್ನು ಮೀರಿ ಪರಿಗಣಿಸಬೇಕು.

(ಲೇಖಕ: ರಿಲಯನ್ಸ್‌ ಜನರಲ್ ಇನ್ಯೂರೆನ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT