ತುಮಕೂರು: ದುಬಾರಿಯಾಗಿದ್ದ ತರಕಾರಿ ದರ ಕೊಂಚ ಇಳಿಕೆಯಾಗಿದ್ದರೆ, ಸೊಪ್ಪು ಅಗ್ಗವಾಗಿದೆ. ಬೇಸಿಗೆಯಲ್ಲಿ ಹಣ್ಣಿನ ಬೆಲೆ ಏರುತ್ತಲೇ ಸಾಗಿದ್ದು, ಕೋಳಿ ಮಾಂಸ ಮತ್ತೆ ಗಗನಮುಖಿಯಾಗಿದೆ.

ಇಳಿದ ಬೀನ್ಸ್: ಶತಕ ದಾಟಿದ್ದ ಬೀನ್ಸ್ ಈ ವಾರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೆ.ಜಿ ₹80–100ಕ್ಕೆ ಇಳಿಕೆ ಕಂಡಿದೆ. ಆಲೂಗೆಡ್ಡೆ, ಬೆಂಡೆಕಾಯಿ, ಬಟಾಣಿ, ಟೊಮೆಟೊ, ಬೆಳ್ಳುಳ್ಳಿ, ನಿಂಬೆಹಣ್ಣು ಬೆಲೆ ಕೊಂಚ ತಗ್ಗಿದೆ. ಗೆಡ್ಡೆಕೋಸು, ಬೀಟ್ರೂಟ್, ಮೂಲಂಗಿ, ಹೂ ಕೋಸು, ಹಾಗಲಕಾಯಿ ತುಸು ತೇಜಿಯಾಗಿದೆ. ಸ್ವಲ್ಪ ಮಟ್ಟಿಗೆ ಏರಿಳಿತ ಕಂಡಿದ್ದರೂ ದುಬಾರಿ ಸ್ಥಿತಿಯಲ್ಲೇ ಇದೆ.

ಸೊಪ್ಪು ಅಗ್ಗ: ಶತಕ ದಾಟಿದ್ದ ಸೊಪ್ಪಿನ ಧಾರಣೆ ಒಮ್ಮೆಲೆ ಅರ್ಧದಷ್ಟು ಇಳಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹70–80, ಮೆಂತ್ಯ ಸೊಪ್ಪು ಕೆ.ಜಿ ₹60–70ಕ್ಕೆ, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಇಳಿಕೆ ದಾಖಲಿಸಿದೆ.

ಹಣ್ಣು ದುಬಾರಿ: ಹಣ್ಣುಗಳ ದರ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ಬಾಳೆಹಣ್ಣು, ಸೀಬೆ, ದ್ರಾಕ್ಷಿ ಮತ್ತಷ್ಟು ತುಟ್ಟಿಯಾಗಿದೆ. ಪೈನಾಪಲ್, ಕಲ್ಲಂಗಡಿ ತುಸು ತಗ್ಗಿದೆ.

ಅಡುಗೆ ಎಣ್ಣೆ: ಎಣ್ಣೆ ಧಾರಣೆ ತುಸು ಏರಿಕೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹173–175, ಪಾಮಾಯಿಲ್ ಕೆ.ಜಿ ₹139–140, ಕಡಲೆಕಾಯಿ ಎಣ್ಣೆ ಕೆ.ಜಿ ₹185–190ಕ್ಕೆ ಹೆಚ್ಚಳವಾಗಿದೆ.

ಬೇಳೆ, ಧಾನ್ಯ: ಬೇಳೆ ತುಸು ಇಳಿಕೆಯಾಗಿದ್ದರೆ, ಕಾಳುಗಳು ಕೊಂಚ ತುಟ್ಟಿಯಾಗಿವೆ. ಸಕ್ಕರೆ ಏರಿಕೆಯತ್ತ ಮುಖ ಮಾಡಿದ್ದು, ಒಂದು ತಿಂಗಳ ಅಂತರದಲ್ಲಿ ಕೆ.ಜಿ.ಗೆ ₹3 ತುಟ್ಟಿಯಾಗಿದೆ.

ಮಸಾಲೆ ಪದಾರ್ಥ: ದನಿಯಾ ಬೀಜ, ಬ್ಯಾಡಗಿ ಮೆಣಸಿನ ಕಾಯಿ ದುಬಾರಿಯಾಗಿವೆ. ಕಾಳು ಮೆಣಸು, ಚಕ್ಕೆ, ಲವಂಗ ಅಲ್ಪ ತೇಜಿಯಾಗಿದೆ.

ದನಿಯಾ ಕೆ.ಜಿ ₹170–200, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹450–480, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–260, ಕಾಳುಮೆಣಸು ಕೆ.ಜಿ ₹760–780, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹265–270, ಲವಂಗ ಕೆ.ಜಿ ₹830–840, ಗುಣಮಟ್ಟದ ಗಸಗಸೆ ಕೆ.ಜಿ ₹1,450–1,600, ಏಲಕ್ಕಿ ಕೆ.ಜಿ ₹3,300–3,600, ಬಾದಾಮಿ ಕೆ.ಜಿ ₹860–880, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹400–420ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ದುಬಾರಿ: ಕೋಳಿ ಮಾಂಸದ ಬೆಲೆ ಗಗನಮುಖಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹190, ರೆಡಿ ಚಿಕನ್ ಕೆ.ಜಿ ₹275, ಸ್ಕಿನ್ಲೆಸ್ ಕೆ.ಜಿ ₹295, ಫಾರಂ ಕೋಳಿ ಕೆ.ಜಿ ₹170ಕ್ಕೆ ಜಿಗಿದಿದೆ. ಮೊಟ್ಟೆ ₹5.95ಕ್ಕೆ ಸಿಗುತ್ತಿದೆ.

ಮೀನು ಏರಿಕೆ: ಮೀನು ಧಾರಣೆ ಏರಿಕೆಯತ್ತಲೇ ಸಾಗಿದ್ದು, ಕಡಿಮೆಯಾಗುವಂತೆ ಕಾಣುತ್ತಿಲ್ಲ. ಬಂಗುಡೆ ಕೆ.ಜಿ ₹460, ಬೂತಾಯಿ ₹260, ಬೊಳಿಂಜರ್ ಕೆ.ಜಿ ₹350, ಅಂಜಲ್ ಕೆ.ಜಿ ₹1,650, ಬಿಳಿಮಾಂಜಿ ₹1,740, ಕಪ್ಪುಮಾಂಜಿ ₹1,230 ಇಂಡಿಯನ್ ಸಾಲ್ಮನ್ ₹1,160, ಸೀಗಡಿ ಕೆ.ಜಿ ₹510–720, ಏಡಿ ಕೆ.ಜಿ ₹720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-17-156142099

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.