ತುಮಕೂರು: ಉಂಡೆ ಕೊಬ್ಬರಿ ಧಾರಣೆ ಗಗನಮುಖಿಯಾಗಿದ್ದು, ಗುರುವಾರ ತಿಪಟೂರು ಎಪಿಎಂಸಿ ಮಾರುಕಟ್ಟೆ ಯಲ್ಲಿ ಕ್ವಿಂಟಲ್ ₹36,006ಕ್ಕೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಕೊಬ್ಬರಿ ಆವಕ ತೀವ್ರವಾಗಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಗುರುವಾರದ ಹರಾಜಿಗೆ ಕೇವಲ 1,482 ಕ್ವಿಂಟಲ್ (3,447 ಚೀಲ) ಆವಕವಾಗಿದ್ದು, ಕನಿಷ್ಠ ಕ್ವಿಂಟಲ್ ₹30,500, ಮಾದರಿ ₹32,000ಕ್ಕೆ ಮಾರಾಟವಾಗಿದೆ. ಸೋಮವಾರ ನಡೆದ ಹರಾಜಿಗೆ 1,621 ಕ್ವಿಂಟಲ್ ಆವಕವಾಗಿದ್ದರೆ, ಗುರುವಾರ ಆವಕ ಮತ್ತಷ್ಟು ಕುಸಿತ ಕಂಡಿತ್ತು.

ಏ. 6ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ₹32,218ಕ್ಕೆ ಮಾರಾಟ ಆಗುವ ಮೂಲಕ ದಾಖಲೆ ನಿರ್ಮಿಸಿತ್ತು. ಈಗ ಹಿಂದಿನ ದಾಖಲೆ ಮುರಿದು ₹36 ಸಾವಿರಕ್ಕೆ ಏರಿಕೆ ಕಂಡಿದೆ.

ಕೊಬ್ಬರಿಗೆ ಉತ್ತಮ ಬೇಡಿಕೆ ಇಲ್ಲವಾಗಿದ್ದರೂ, ಇರುವ ಅತ್ಯಲ್ಪ ಪ್ರಮಾಣದ ಬೇಡಿಕೆಯನ್ನು ಪೂರೈಸುವಷ್ಟು ಮಾಲು ಬರುತ್ತಿಲ್ಲ. ಆವಕ ತಗ್ಗಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-1283719840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.