ತುಮಕೂರು: ಮಾರುಕಟ್ಟೆಯಲ್ಲಿ ಧನ್ಯ ಬೆಲೆ ಒಮ್ಮೆಲೆ ದುಬಾರಿಯಾಗಿದ್ದು, ಮೆಣಸಿನಕಾಯಿ ಸಹ ಏರಿಕೆ ಕಂಡಿದೆ. ಬೇಳೆಯೂ ಹೆಚ್ಚಳವಾಗಿದ್ದು, ಸೊಪ್ಪು, ತರಕಾರಿ ಚೇತರಿಸಿದೆ. ಕೋಳಿ ದರ ಅಲ್ಪ ಕಡಿಮೆಯಾಗಿದ್ದು, ಮೀನು ಮತ್ತಷ್ಟು ತುಟ್ಟಿಯಾಗಿದೆ.

ತರಕಾರಿ: ಬೀನ್ಸ್ ದುಬಾರಿ ಸ್ಥಿತಿಯಲ್ಲೇ ಇದ್ದು, ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು, ಬದನೆಕಾಯಿ, ಬಟಾಣಿ, ಕ್ಯಾಪ್ಸಿಕಂ ದುಬಾರಿಯಾಗಿದೆ. ಆಲೂಗೆಡ್ಡೆ, ಮೂಲಂಗಿ, ಬೆಂಡೆಕಾಯಿ ತುಸು ಇಳಿಕೆಯಾಗಿದೆ. ಕಳೆದ ಕೆಲ ವಾರಗಳ ಅಂತರದಲ್ಲಿ ಹಾಗಲ ಕಾಯಿ ದರ ಅರ್ಧದಷ್ಟು ತಗ್ಗಿದೆ. ನಿಂಬೆ ಹಣ್ಣು, ಸೌತೆಕಾಯಿ ದುಬಾರಿಯಾಗಿದೆ.

ಸೊಪ್ಪು ಏರಿಕೆ: ಸೊಪ್ಪಿನ ದರ ಇನ್ನೂ ತೇಜಿಯಾಗಿದೆ. ಬೇಸಿಗೆಯಲ್ಲಿ ಸೊಪ್ಪಿನ ಬೆಳೆ ಕಾಪಾಡುವುದು ಕಷ್ಟಕರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳವಾಗಲಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60ಕ್ಕೆ, ಸಬ್ಬಕ್ಕಿ ಕೆ.ಜಿ ₹60–70, ಮೆಂತ್ಯ ಸೊಪ್ಪು ಕೆ.ಜಿ ₹60–70, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ.

ಹಣ್ಣುಗಳು: ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕರಬೂಜ, ಕಲ್ಲಂಗಡಿ ಹೆಚ್ಚಳವಾಗಿದ್ದರೆ, ಪೈನಾಪಲ್ ಕೊಂಚ ಕಡಿಮೆಯಾಗಿದೆ. ಉಳಿದ ಹಣ್ಣುಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಅಡುಗೆ ಎಣ್ಣೆ: ಪಾಮಾಯಿಲ್ ತುಸು ಏರಿದ್ದರೆ, ಕಡಲೆಕಾಯಿ ಎಣ್ಣೆ ಕೊಂಚ ತಗ್ಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹173–175, ಪಾಮಾಯಿಲ್ ಕೆ.ಜಿ ₹140–142, ಕಡಲೆಕಾಯಿ ಎಣ್ಣೆ ಕೆ.ಜಿ ₹180–185ಕ್ಕೆ ಮಾರಾಟವಾಗುತ್ತಿದೆ.

ಬೇಳೆ ಹೆಚ್ಚಳ: ಬೇಳೆ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು, ತೊಗರಿ ಬೇಳೆ ಕೆ.ಜಿ.ಗೆ ₹25ರ ವರೆಗೂ ಜಿಗಿದಿದೆ. ಉದ್ದಿನಬೇಳೆ ಸಹ ತುಟ್ಟಿಯಾಗಿದೆ. ಕಡಲೆ ಬೇಳೆ, ಶೇಂಗಾ ತುಸು ತಗ್ಗಿದೆ.

ದನಿಯಾ ದುಬಾರಿ: ಕೊತ್ತಂಬರಿ ಬೀಜದ ದರ ಒಮ್ಮೆಲೆ ದುಬಾರಿಯಾಗಿದ್ದು, ಕೆ.ಜಿ.ಗೆ ₹30ರವರೆಗೂ ಏರಿಕೆ ಕಂಡಿದೆ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಇಲ್ಲವಾಗಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತುಟ್ಟಿಯಾಗಬಹುದು ಎಂದುಹೇಳಲಾಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿ, ಖಾರದ ಮೆಣಸಿನಕಾಯಿ ಸಹ ತೇಜಿಯಾಗಿದೆ. ಜೀರಿಗೆ, ಚಕ್ಕೆ, ಲವಂಗ ಕೊಂಚ ಹೆಚ್ಚಳವಾಗಿದೆ. ಒಣ ಹಣ್ಣುಗಳು ಅಲ್ಪ ಅಗ್ಗವಾಗಿವೆ.

ದನಿಯಾ ಕೆ.ಜಿ ₹170–180, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹430–450, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಕಾಳುಮೆಣಸು ಕೆ.ಜಿ ₹720–740, ಜೀರಿಗೆ ಕೆ.ಜಿ ₹280–290, ಚಕ್ಕೆ ಕೆ.ಜಿ ₹280–300, ಲವಂಗ ಕೆ.ಜಿ ₹820–840, ಗುಣಮಟ್ಟದ ಗಸಗಸೆ ಕೆ.ಜಿ ₹1,450–1,500, ಏಲಕ್ಕಿ ಕೆ.ಜಿ ₹3,100–3,200, ಬಾದಾಮಿ ಕೆ.ಜಿ ₹870–880, ಗೋಡಂಬಿ ಕೆ.ಜಿ ₹820–900, ಒಣದ್ರಾಕ್ಷಿ ಕೆ.ಜಿ ₹420–440ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಕೋಳಿ ಮಾಂಸದ ಬೆಲೆ ತುಸು ಇಳಿದಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹235, ಸ್ಕಿನ್ಲೆಸ್ ಕೆ.ಜಿ ₹260ಕ್ಕೆ ತಗ್ಗಿದ್ದು, ಫಾರಂ ಕೋಳಿ ಕೆ.ಜಿ ₹140ಕ್ಕೆ ಏರಿದೆ. ಮೊಟ್ಟೆ ₹4.84ಕ್ಕೆ ಏರಿದೆ.

ಮೀನು ದುಬಾರಿ: ಮೀನಿನ ದರ ಗಗನಮುಖಿಯಾಗಿದೆ. ಬಂಗುಡೆ ಕೆ.ಜಿ ₹470, ಬೂತಾಯಿ ₹380, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹1,420, ಬಿಳಿಮಾಂಜಿ ₹1,550, ಕಪ್ಪುಮಾಂಜಿ ₹1,080 ಇಂಡಿಯನ್ ಸಾಲ್ಮನ್ ₹1,000, ಸೀಗಡಿ ಕೆ.ಜಿ ₹510–720, ಏಡಿ ಕೆ.ಜಿ ₹720ಕ್ಕೆ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.