ತುಮಕೂರು: ಉಂಡೆ ಕೊಬ್ಬರಿ ಧಾರಣೆ ಮತ್ತೊಮ್ಮೆ ದಾಖಲೆ ಬರೆದಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆ ಯಲ್ಲಿ ಸೋಮವಾರ ನಡೆದ ಹರಾಜಿನಲ್ಲಿಕ್ವಿಂಟಲ್ ₹32,218ಕ್ಕೆ ಮಾರಾಟವಾಗಿದೆ.

ಕನಿಷ್ಠ ₹30,000, ಮಾದರಿ ₹31,860ಕ್ಕೆ ಖರೀದಿ ನಡೆದಿದೆ. ಒಟ್ಟು 1,621 ಕ್ವಿಂಟಲ್ ಆವಕವಾಗಿತ್ತು. ಹಿಂದಿನ ವರ್ಷದ ಜೂನ್ 30ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ₹31,606ಕ್ಕೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಈಗ ಹೊಸ ದಾಖಲೆಗೆ ನಾಂದಿ ಹಾಡಿದೆ.

ಬೆಲೆ ಏರಿಕೆಯಾಗುತ್ತಿರುವುದು ತೆಂಗು ಬೆಳೆಗಾರರಿಗೆ ಹರ್ಷ ತಂದಿದ್ದರೂ, ರೈತರ ಬಳಿ ಕೊಬ್ಬರಿ ದಾಸ್ತಾನು ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗ ಬಹುದು ಎಂದು ವರ್ತಕರು ಹೇಳುತ್ತಿದ್ದಾರೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಸೋಮವಾರ, ಗುರುವಾರ ಹರಾಜು ನಡೆಯುತ್ತದೆ. ಸಾಮಾನ್ಯವಾಗಿ ಪ್ರತಿ ಹರಾಜಿನ ಸಮಯದಲ್ಲೂ 3 ಸಾವಿರ ಕ್ವಿಂಟಲ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಸೋಮವಾರದ ಹರಾಜಿಗೆ ಕೇವಲ 1,621 ಕ್ವಿಂಟಲ್ ಬಂದಿದೆ.

ಉತ್ತರ ಭಾರತದ ರಾಜ್ಯಗಳು ಸೇರಿದಂತೆ ಬೇರೆ ಕಡೆಗಳಿಂದ ಕೊಬ್ಬರಿಗೆ ಹೆಚ್ಚು ಬೇಡಿಕೆ ಇಲ್ಲವಾಗಿದೆ. ಸೋಮವಾರ ವರ್ತಕರ ಮಂಡಿಗಳಿಗೆ ಹೆಚ್ಚು ಕೊಬ್ಬರಿ ಬಂದಿರಲಿಲ್ಲ. ಆವಕ ಕುಸಿದಿರುವುದು ಬೆಲೆ ಏರಿಯಾಗುವಂತೆ ಮಾಡಿದೆ ಎಂದು ಕೊಬ್ಬರಿ ರವಾನೆ ದಾರರೊಬ್ಬರು ತಿಳಿಸಿದರು.

ಈ ವರ್ಷದ ಆರಂಭದಲ್ಲೇ ₹31 ಸಾವಿರ ದಾಟುವ ಮೂಲಕ ಬೆಲೆ ಏರಿಕೆ ಸುಳಿವು ನೀಡಿತ್ತು. ₹30 ಸಾವಿರದಿಂದ ₹31ರ ಸಾವಿರದ ನಡುವೆ ಮಾರಾಟ ವಾಗುತ್ತಿದ್ದ ಕೊಬ್ಬರಿ ₹32 ಸಾವಿರ ದಾಟಿದೆ. ಸಾಮಾನ್ಯವಾಗಿ ಜೂನ್ ತಿಂಗಳಿಂದ ದೀಪಾವಳಿ ವೇಳೆಗೆ ಧಾರಣೆ ಹೆಚ್ಚಳವಾಗುತಿತ್ತು.

ಕೊಬ್ಬರಿ ಉತ್ಪಾದನೆ ಗಣನೀಯವಾಗಿ ಇಳಿದಿದೆ. ಮಾರುಕಟ್ಟೆಯಲ್ಲಿ ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಬಹಳಷ್ಟು ರೈತರು ಎಳನೀರು ಮಾರಾಟ ಮಾಡುತ್ತಿದ್ದಾರೆ. ಕಾಯಿ ಒಣಗಿಸಿ ಕೊಬ್ಬರಿ ಮಾಡುವುದು ಕಡಿಮೆಯಾಗುತ್ತಿದ್ದು, ಆವಕ ತಗ್ಗುವಂತೆ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-1470522881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.