ತುಮಕೂರು: ಈ ವಾರ ಬೀನ್ಸ್ ಗಗನಮುಖಿಯಾಗಿದ್ದು, ತರಕಾರಿ, ಧಾನ್ಯ, ಬ್ಯಾಡಗಿ ಮೆಣಸಿನಕಾಯಿ ಏರಿಕೆಯತ್ತ ಮುಖ ಮಾಡಿದೆ. ಸೊಪ್ಪು ಮತ್ತಷ್ಟು ದುಬಾರಿಯಾಗಿದೆ. ಹಣ್ಣಿನ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಕೋಳಿ ಮಾಂಸ ಅಲ್ಪ ಕಡಿಮೆಯಾಗಿದ್ದು, ಕೋಳಿ ಮೊಟ್ಟೆ ದರ ಹೆಚ್ಚಳವಾಗಿದೆ.

ಬೀನ್ಸ್ ದುಬಾರಿ: ಬೀನ್ಸ್ ಬೆಲೆ ಮತ್ತೊಮ್ಮೆ ಶತಕದತ್ತ ಸಾಗಿದಂತೆ ಕಾಣುತ್ತಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹70–80ಕ್ಕೆ ಏರಿಕೆಯಾಗಿದ್ದು, ಚಿಲ್ಲರೆಯಾಗಿ ಹಾಗೂ ಇತರೆಡೆಗಳಲ್ಲಿ ಕೆ.ಜಿ ₹100ರ ವರೆಗೂ ಮಾರಾಟವಾಗುತ್ತಿದೆ.

ಬೇಸಿಗೆ ಬಿಸಿಲಿನ ತಾಪ ತೀವ್ರ ಸ್ವರೂಪ ಪಡೆದುಕೊಂಡಿದ್ದು, ತರಕಾರಿ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಕಷ್ಟಕರವಾಗಿದೆ. ಮಾರುಕಟ್ಟೆಯಲ್ಲಿ ಆವಕ ತಗ್ಗಿದ್ದು, ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಬದನೆಕಾಯಿ, ಮೂಲಂಗಿ ಮತ್ತೆ ಏರಿಕೆ ದಾಖಲಿಸಿದ್ದರೆ, ಬೀಟ್ರೂಟ್, ಆಲೂಗೆಡ್ಡೆ ಅಲ್ಪ ಕಡಿಮೆಯಾಗಿದೆ. ಕ್ಯಾಪ್ಸಿಕಾಮ್ ಸಹ ಇಳಿಕೆಯಾಗಿದೆ.

ಸೊಪ್ಪು ಹೆಚ್ಚಳ: ಉಷ್ಣಾಂಶ ತಾಳಲಾರದೆ ಸೊಪ್ಪಿನ ಬೆಳೆ ಒಣಗುತ್ತಿದ್ದು, ಬೆಲೆ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಕೊಂಚ ತಗ್ಗಿದ್ದರೆ, ಉಳಿದ ಸೊಪ್ಪುಗಳು ಏರಿಕೆ ಕಂಡಿವೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40ಕ್ಕೆ ಇಳಿದಿದ್ದರೆ, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಹೆಚ್ಚಳವಾಗಿದೆ.

ಹಣ್ಣು ಯಥಾಸ್ಥಿತಿ: ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಹಣ್ಣುಗಳ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಏಲಕ್ಕಿ ಬಾಳೆಹಣ್ಣು, ಪೈನಾಪಲ್, ದ್ರಾಕ್ಷಿ ತುಸು ತೇಜಿಯಾಗಿದೆ.

ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ಏರಿದ್ದರೆ, ಪಾಮಾಯಿಲ್ ಕೊಂಚ ತಗ್ಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹173–175, ಪಾಮಾಯಿಲ್ ಕೆ.ಜಿ ₹139–141, ಕಡಲೆಕಾಯಿ ಎಣ್ಣೆ ಕೆ.ಜಿ ₹185–190ಕ್ಕೆ ಏರಿದೆ.

ಬೇಳೆ ಏರಿಕೆ: ಬೇಳೆ ಧಾರಣೆ ಈ ವಾರವೂ ಏರಿಕೆಯತ್ತಲೇ ಸಾಗಿದೆ. ತೊಗರಿ ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಕಾಳು, ಅವರೆಕಾಳು ತುಟ್ಟಿಯಾಗಿದೆ. ಶೇಂಗಾ ಕೆ.ಜಿ.ಗೆ ₹15ರ ವರೆಗೂ ಇಳಿದಿದೆ.

ಬ್ಯಾಡಗಿ ಹೆಚ್ಚಳ: ಕೊತ್ತಂಬರಿ ಬೀಜದ ಬೆಲೆ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದ್ದು, ಬ್ಯಾಡಗಿ ಮೆಣಸಿನಕಾಯಿ ಮತ್ತಷ್ಟು ಜಿಗಿತ ಕಂಡಿದೆ.

ದನಿಯಾ ಕೆ.ಜಿ ₹170–180, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹460–480, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಕಾಳುಮೆಣಸು ಕೆ.ಜಿ ₹730–750, ಜೀರಿಗೆ ಕೆ.ಜಿ ₹265–275, ಚಕ್ಕೆ ಕೆ.ಜಿ ₹280–300, ಲವಂಗ ಕೆ.ಜಿ ₹800–850, ಗುಣಮಟ್ಟದ ಗಸಗಸೆ ಕೆ.ಜಿ ₹1,400–1,500, ಏಲಕ್ಕಿ ಕೆ.ಜಿ ₹3,100–3,200, ಬಾದಾಮಿ ಕೆ.ಜಿ ₹870–880, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹420–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಕೋಳಿ ಮಾಂಸದ ಬೆಲೆ ಅತ್ಯಲ್ಪ ಇಳಿದಿದ್ದರೆ, ಮೊಟ್ಟೆ (1ಕ್ಕೆ) ₹1.10 ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹155, ರೆಡಿ ಚಿಕನ್ ಕೆ.ಜಿ ₹230, ಸ್ಕಿನ್ಲೆಸ್ ಕೆ.ಜಿ ₹255ಕ್ಕೆ ತಗ್ಗಿದ್ದು, ಫಾರಂ ಕೋಳಿ ಕೆ.ಜಿ ₹145ಕ್ಕೆ ಏರಿದೆ. ಮೊಟ್ಟೆ ₹5.75ಕ್ಕೆ ಜಿಗಿದಿದೆ.

ಮೀನು: ಮೀನಿನ ದರ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಬಂಗುಡೆ ಕೆ.ಜಿ ₹430, ಬೂತಾಯಿ ₹340, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹1,420, ಬಿಳಿಮಾಂಜಿ ₹1,550, ಕಪ್ಪುಮಾಂಜಿ ₹1,220 ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹510–670, ಏಡಿ ಕೆ.ಜಿ ₹900ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-1404427574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.