ಮಾರುಕಟ್ಟೆಗೆ ಟರ್ಬೊಸ್ಟೀಲ್‌ ಕಂಬಿ

ಬುಧವಾರ, ಮಾರ್ಚ್ 27, 2019
26 °C

ಮಾರುಕಟ್ಟೆಗೆ ಟರ್ಬೊಸ್ಟೀಲ್‌ ಕಂಬಿ

Published:
Updated:
Prajavani

ಬೆಂಗಳೂರು: ಉನ್ನತ ದರ್ಜೆ ಉಕ್ಕಿನ ಕಂಬಿಗಳಿಗೆ  ಎಲ್‌ಪಿಎಸ್ (ಕಡಿಮೆ ಫಾಸ್ಫರಸ್ ಹಾಗೂ ಸಲ್ಫರ್) ತಂತ್ರಜ್ಞಾನ ಬಳಸಿರುವ ಟರ್ಬೋಸ್ಟೀಲ್ ಎಲ್‌ಪಿಎಸ್‌ಟಿಎಂಟಿ ಕಂಬಿ (ಸ್ಟೀಲ್‌ ರಾಡ್‌) ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

‘ಈ ಕಂಬಿಗಳ ತಯಾರಿಕೆಯಲ್ಲಿನ ತಂತ್ರಜ್ಞಾನ ಶ್ರೇಷ್ಠತೆ ಇತರ ಉತ್ಪನ್ನಗಳಿಗಿಂತ ಎದ್ದು ಕಾಣುವ ಪ್ರತ್ಯೇಕತೆ, ಮೇಲ್ಮೈ, ಹೊಳಪು ಮತ್ತು ಉಬ್ಬು (ರಿಬ್) ವಿನ್ಯಾಸ ಅಸಾಮಾನ್ಯವೆನಿಸಿದೆ. ನಿರ್ಮಾಣ ಉದ್ಯಮ ತಜ್ಞರಿಂದ  ಮೆಚ್ಚುಗೆ ಗಳಿಸಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಚಂದ್ರ ರಾಮಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ತಯಾರಿಕಾ ಘಟಕ ಹೊಂದಿರುವ ಪ್ರಕಾಶ್ ಸ್ಪಾಂಜ್ ಐರನ್ ಆಂಡ್ ಪವರ್ ಪ್ರೈವೇಟ್ ಲಿಮಿಟೆಡ್, ಟರ್ಬೋಸ್ಟೀಲ್  ಜನಪ್ರಿಯ ಬ್ರ್ಯಾಂಡ್‌ ಹೆಸರಿನಲ್ಲಿ ವಿಶ್ವ ದರ್ಜೆಯ ಗುಣಮಟ್ಟದ ಉಕ್ಕಿನ ಕಂಬಿಗಳನ್ನು ತಯಾರಿಸುತ್ತಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಡೀಲರ್‌ಗಳಿದ್ದು, ಈ  ಉತ್ಪನ್ನವನ್ನು ಶೀಘ್ರದಲ್ಲೇ ಇತರ ರಾಜ್ಯಗಳಿಗೆ ಪರಿಚಯಿಸುವ ಯೋಜನೆ ಇದೆ’ ಎಂದರು. ಉತ್ಪನ್ನದ ಪ್ರಚಾರ ರಾಯಭಾರಿ ರಮೇಶ್ ಅರವಿಂದ್ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !