ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ವಿ. ಬೆಲೆ ಏರಿಕೆ

Published 1 ಜೂನ್ 2023, 14:47 IST
Last Updated 1 ಜೂನ್ 2023, 14:47 IST
ಅಕ್ಷರ ಗಾತ್ರ

undefined

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ) ಸಿಗುವ ಸಬ್ಸಿಡಿಯು ಜೂನ್‌ 1ರಿಂದ ಅನ್ವಯವಾಗುವಂತೆ ಕಡಿಮೆ ಆಗಿದ್ದು, ಇ.ವಿ. ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಾದ ಟಿವಿಎಸ್, ಏಥರ್ ಮತ್ತು ಓಲಾ ತಮ್ಮ ವಾಹನಗಳ ಬೆಲೆ ಹೆಚ್ಚಿಸಿವೆ.

ಐಕ್ಯೂಬ್ ಬೆಲೆಯನ್ನು ₹17 ಸಾವಿರದಿಂದ ₹20 ಸಾವಿರದವರೆಗೆ ಹೆಚ್ಚಿಸುತ್ತಿರುವುದಾಗಿ ಟಿವಿಎಸ್ ಹೇಳಿದೆ. ಏಥರ್ ಕಂಪನಿಯು 450X ಮಾದರಿಯ ಬೆಲೆಯನ್ನು ₹1.45 ಲಕ್ಷಕ್ಕೆ ಹೆಚ್ಚಿಸಿದೆ (ಬೆಂಗಳೂರು ಎಕ್ಸ್‌ ಷೋರೂಂ ಬೆಲೆ). 450X ಪ್ರೊ ಮಾದರಿಯ ಬೆಲೆಯಲ್ಲಿ ₹8 ಸಾವಿರದಷ್ಟು ಹೆಚ್ಚಳ ಆಗಿದೆ.

ಓಲಾ ಕಂಪನಿಯು ಎಸ್‌1 ಪ್ರೊ ಬೆಲೆಯನ್ನು ₹1,39,999ಕ್ಕೆ ಹೆಚ್ಚಿಸಿದೆ. ಕಂಪನಿಯ ದ್ವಿಚಕ್ರ ವಾಹನಗಳ ಬೆಲೆಯು ಸರಿಸುಮಾರು ₹15 ಸಾವಿರದಷ್ಟು ಹೆಚ್ಚಾಗಿದೆ. ಆದರೆ ತಾನು ಬೆಲೆ ಹೆಚ್ಚಿಸುವುದಿಲ್ಲ ಎಂದು ಹೀರೊ ಎಲೆಕ್ಟ್ರಿಕ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT