ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲುಕಾಸ್‌ ಟಿವಿಎಸ್‌; ಎರಡು ದಿನಗಳ ಕೆಲಸ ಕಡಿತ

Last Updated 17 ಆಗಸ್ಟ್ 2019, 5:03 IST
ಅಕ್ಷರ ಗಾತ್ರ

ಚೆನ್ನೈ: ಟಿವಿಎಸ್‌ ಗ್ರೂಪ್‌ನ ಅಂಗ ಸಂಸ್ಥೆಗಳಾಗಿರುವ ವಾಹನ ಬಿಡಿಭಾಗ ತಯಾರಿಸುವ ಲುಕಾಸ್ ಟಿವಿಎಸ್‌ ಮತ್ತು ಸುಂದರಂ ಕ್ಲೇಟನ್‌, ತಮ್ಮ ನೌಕರರ ಕೆಲಸದ ಅವಧಿಯಲ್ಲಿ ಎರಡು ದಿನಗಳ ಕಡಿತ ಘೋಷಿಸಿವೆ.

ವಾಹನ ತಯಾರಿಕೆ ಉದ್ದಿಮೆಯು ನಿರಂತರವಾಗಿ ಮಾರಾಟ ಕುಸಿತ ದಾಖಲಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಆ. 16 ಮತ್ತು 17ರಂದು ಈ ಕೆಲಸ ಕಡಿತ ಜಾರಿಯಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

ವಾಹನ ಮತ್ತು ವಾಹನಯೇತರ ವಲಯಕ್ಕೆ ಬಿಡಿಭಾಗಗಳ ಅಲ್ಯುಮಿನಿಯಂ ಅಚ್ಚು ತಯಾರಿಸುವ ಸುಂದರಂ ಕ್ಲೇಟನ್‌ ಕೂಡ ಇದೇ ಬಗೆಯ ನಿರ್ಧಾರ ಕೈಗೊಂಡಿದೆ.

ಎಂಎಸ್‌ಐ ಉದ್ಯೋಗ ಕಡಿತ: ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) 3 ಸಾವಿರದಷ್ಟು ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ.

‘ಮಾರಾಟ ಕುಸಿದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಯಂ ಕೆಲಸಗಾರರಿಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಕಂಪನಿ ಅಧ್ಯಕ್ಷ ಆರ್‌. ಸಿ. ಭಾರ್ಗವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT