ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4 ಸಾವಿರ ಕೋಟಿಗೆ ವಹಿವಾಟು: ಡುಕಾಬ್ ಸಮೂಹದ ಗುರಿ

Last Updated 10 ಫೆಬ್ರುವರಿ 2023, 5:24 IST
ಅಕ್ಷರ ಗಾತ್ರ

ಬೆಂಗಳೂರು: ಯುಎಇ ಮೂಲದ ಡುಕಾಬ್ ಸಮೂಹವು ಭಾರತದಲ್ಲಿ ತನ್ನ ವಹಿವಾಟನ್ನು ಎರಡು ವರ್ಷಗಳಲ್ಲಿ ₹ 4 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಸಮೂಹದ ಸಿಇಒ ಮಹಮ್ಮದ್‌ ಅಲ್ಮುತಾವಾ ಹೇಳಿದರು. ಸಮೂಹವು ಸದ್ಯ ಭಾರತದಲ್ಲಿ ₹ 2 ಸಾವಿರ ಕೋಟಿ ಮೊತ್ತದ ವಹಿವಾಟು ನಡೆಸುತ್ತಿದೆ.

ಭಾರತದಲ್ಲಿ ತನ್ನ ವಹಿವಾಟು ಹೆಚ್ಚಿಸುವ ಗುರಿಯ ಭಾಗವಾಗಿ ಬೆಂಗಳೂರಿನಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾದ ಕಚೇರಿಯನ್ನು ಸಮೂಹವು ಆರಂಭಿಸಿದೆ.

2022ರಲ್ಲಿ ಭಾರತ–ಯುಎಇ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ಕ್ಕೆ (ಸಿಇಪಿಎ) ಸಹಿ ಮಾಡಿದ್ದು, ಅದರ ಅಡಿಯಲ್ಲಿ ಐದು ವರ್ಷಗಳಲ್ಲಿ ತೆರಿಗೆ ಪ್ರಮಾಣವು ಶೂನ್ಯಕ್ಕೆ ಬರಲಿದೆ. ಒಪ್ಪಂದದಿಂದಾಗಿ ಉಭಯ ದೇಶಗಳ ಮಧ್ಯೆ ತೈಲಯೇತರ ವ್ಯಾಪಾರ ಐದು ವರ್ಷಗಳಲ್ಲಿ ₹ 4.92 ಲಕ್ಷ ಕೋಟಿಯಿಂದ ₹ 8.2 ಲಕ್ಷ ಕೋಟಿಗೆ ಹೆಚ್ಚಾಗಲಿದೆ ಎಂದು ಅಲ್ಮುತಾವಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT