ಶುಕ್ರವಾರ, ನವೆಂಬರ್ 22, 2019
25 °C

ಪಿಎಫ್‌: ಸಾರ್ವತ್ರಿಕಖಾತೆ ಸಂಖ್ಯೆ ಸುಲಭ

Published:
Updated:
Prajavani

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರು ಇನ್ನು ಮುಂದೆ ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು (ಯುಎಎನ್‌) ಸುಲಭವಾಗಿ ಪಡೆಯಬಹುದು.

ಉದ್ಯೋಗ ಬದಲಿಸಿದಾಗ ಪಿಎಫ್‌ ಮೊತ್ತವನ್ನು ವರ್ಗಾಯಿಸಲು ನೆರವಾಗುವ ಮತ್ತು ಉದ್ಯೋಗಿಯ ಜೀವಿತಾವಧಿಯ ಉದ್ದಕ್ಕೂ ಬಳಸಬಹುದಾದ ವಿಶಿಷ್ಟ ‘ಯುಎಎನ್‌’ ಪಡೆಯಲು ಸದಸ್ಯರು ತಾವು ಕೆಲಸ ಮಾಡುವ ಕಂಪನಿಗಳ ಮಾಲೀಕರನ್ನು ನೆಚ್ಚಿಕೊಳ್ಳುವ ಅಗತ್ಯ ಇಲ್ಲ. ಇನ್ನು ಮುಂದೆ ಸದಸ್ಯರು ಭವಿಷ್ಯ ನಿಧಿ ಸಂಘಟನೆಯ ಅಂತರ್ಜಾಲ ತಾಣದ ಮೂಲಕವೇ ಇದನ್ನು ಸುಲಭವಾಗಿ ಪಡೆದುಕೊಳ್ಳಬಹುದು.

‘ಇಪಿಎಫ್‌ಒ’ದ 65 ಲಕ್ಷದಷ್ಟು ನಿವೃತ್ತರು ತಮ್ಮ ಪಿಂಚಣಿ ಪಾವತಿ ಆದೇಶಪತ್ರವನ್ನು (ಪಿಪಿಒ) ಡಿಜಿಲಾಕರ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ.

ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು, ಶುಕ್ರವಾರ ಇಲ್ಲಿ ಆಚರಿಸಿದ ಸಂಘಟನೆಯ 67ನೇ ಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಈ ಎರಡೂ ಸೌಲಭ್ಯಗಳಿಗೆ ಚಾಲನೆ ನೀಡಿದರು. ‘ಉದ್ಯೋಗಿಗಳ ಪಿಂಚಣಿ ಯೋಜನೆ 1995ರ ಬಗ್ಗೆ ಸಾಕಷ್ಟು ಮನವಿಗಳು ಬಂದಿವೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)