ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜೀವನ್ ಮತ್ತು ಮ್ಯಾಕ್ಸ್‌ ಲೈಫ್‌ ನಡುವೆ ಒಪ್ಪಂದ

Last Updated 6 ಮಾರ್ಚ್ 2023, 13:47 IST
ಅಕ್ಷರ ಗಾತ್ರ

ಬೆಂಗಳೂರು: ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ತನ್ನ ಗ್ರಾಹಕರಿಗೆ ವಿವಿಧ ಜೀವ ವಿಮಾ ಸೇವೆಗಳನ್ನು ಒದಗಿಸಲು, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದೆ. 2017ರಲ್ಲಿ ಆರಂಭವಾದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌, ದೇಶದ 254 ಜಿಲ್ಲೆಗಳಲ್ಲಿ ಒಟ್ಟು 606 ಶಾಖೆಗಳನ್ನು ಹೊಂದಿದೆ.

‘ಈ ಪಾಲುದಾರಿಕೆಯು ಮ್ಯಾಕ್ಸ್ ಲೈಫ್ ಕಂಪನಿಯ, ಬ್ಯಾಂಕ್‌ಗಳ ಮೂಲಕ ನಡೆಸುವ ವಿಮಾ ವಹಿವಾಟುಗಳನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ್ ತ್ರಿಪಾಠಿ ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಇತ್ತಿರಾ ಡೇವಿಸ್ ಅವರು, ‘ಈ ಪಾಲುದಾರಿಕೆಯ ಮೂಲಕ ನಾವು ಮಧ್ಯಮ ವರ್ಗಗಳಿಗೆ ಸೇರಿದ ಮಹತ್ವಾಕಾಂಕ್ಷಿ ಜನರಿಗೆ ಹಣಕಾಸಿನ ರಕ್ಷಣೆ, ಉಳಿತಾಯ ಹಾಗೂ ನಿವೃತ್ತಿ ನಂತರದ ಸೇವೆ ಒದಗಿಸುವುದನ್ನು ಹೆಚ್ಚಸುವ ಗುರಿ ಹೊಂದಿದ್ದೇವೆ. ಕಿರು ಹಣಕಾಸು ಬ್ಯಾಂಕಿಂಗ್ ವಲಯದಲ್ಲಿ ನಮ್ಮ ಮುಂಚೂಣಿ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲು ಕೂಡ ಇದು ನೆರವಾಗುವ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT