ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್ ರೈಲು ಚಕ್ರ ಬೆಂಗಳೂರಿನಲ್ಲಿ ತಯಾರಿ

Last Updated 6 ಮೇ 2022, 14:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಂದೇ ಭಾರತ್ ರೈಲುಗಳ ಚಕ್ರಗಳನ್ನು ಉಕ್ರೇನ್‌ನಿಂದ ತರಿಸಿಕೊಳ್ಳುವ ಯೋಜನೆಗೆ ಯುದ್ಧದ ಕಾರಣದಿಂದ ಅಡ್ಡಿ ಉಂಟಾಗಿದ್ದು, ಆ ಚಕ್ರಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ.

ಒಟ್ಟು 36 ಸಾವಿರ ಚಕ್ರಗಳ ಪೈಕಿ 128 ಚಕ್ರಗಳನ್ನು ಉಕ್ರೇನ್‌ನಿಂದ ರಸ್ತೆ ಮಾರ್ಗವಾಗಿ ರೊಮೇನಿಯಾಕ್ಕೆ ಸಾಗಿಸಲಾಗಿದೆ. ಅಲ್ಲಿಂದ ವಿಮಾನದಲ್ಲಿ ಅವುಗಳನ್ನು ಈ ತಿಂಗಳ ಮೂರನೆಯ ವಾರದಲ್ಲಿ ತರಬೇಕಿದೆ ಎಂದು ಮೂಲಗಳು ತಿಳಿಸಿವೆ.

ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ತಯಾರಿಕಾ ಚಟುವಟಿಕೆ ಸ್ಥಗಿತಗೊಂಡಿದೆ. ಹೀಗಾಗಿ, ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೆ ಚಕ್ರ ಕಾರ್ಖಾನೆಯು ಈ ಚಕ್ರಗಳ ತಯಾರಿಕೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಿದೆ ಎಂದು ಗೊತ್ತಾಗಿದೆ. ತಯಾರಿಕೆಯು ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT