ನವದೆಹಲಿ: ‘ಪ್ರಸಕ್ತ ವರ್ಷದ ಜನವರಿ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ವಾರಸುದಾರರಿಲ್ಲದ ₹60,518 ಕೋಟಿಯಷ್ಟು ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (ಡಿಇಎ) ವರ್ಗಾಯಿಸಿವೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಫೆಬ್ರುವರಿ ಅಂತ್ಯದ ವೇಳೆಗೆ ವಿಮಾ ಕಂಪನಿಗಳ ಬಳಿ ಕ್ಲೇಮ್ ಮಾಡದ ವಿಮಾ ಮೊತ್ತ ₹8,973 ಕೋಟಿಯಷ್ಟಿದ್ದರೆ, ಸೆಬಿ ಬಳಿ ಮ್ಯೂಚುವಲ್ ಫಂಡ್ನಲ್ಲಿನ ಕ್ಲೇಮ್ ಮಾಡದ ₹3,749 ಕೋಟಿಯಷ್ಟಿದೆ ಎಂದು ಹೇಳಿದ್ದಾರೆ.

ಹಕ್ಕುದಾರರನ್ನು ಗುರುತಿಸಿ, ಅವರಿಗೆ ಮೊತ್ತವನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ, ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.