ಸೋಮವಾರ, ನವೆಂಬರ್ 18, 2019
23 °C

₹4,999ಕ್ಕೆ ಐಟೆಲ್‌ ಎ46 ಸ್ಮಾರ್ಟ್‌ಫೋನ್

Published:
Updated:
Prajavani

ಬೆಂಗಳೂರು: ಐಟೆಲ್‌ ಮೊಬೈಲ್‌ ತಯಾರಿಕಾ ಕಂಪನಿಯು ಭಾರತಕ್ಕೆ ಪ್ರವೇಶಿಸಿದ ಮೂರು ವರ್ಷಗಳಲ್ಲಿಯೇ 5 ಕೋಟಿಗೂ ಅಧಿಕ ಗ್ರಾಹಕರನ್ನು ಸಂಪಾದಿಸಿಕೊಂಡಿದೆ.

ಈ ಸಂಭ್ರಮ ಮತ್ತು ದೀಪಾವಳಿ ಹಬ್ಬದ ಕೊಡುಗೆ ಯಾಗಿ ಐಟೆಲ್ ಇದೀಗ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರು ಕೇವಲ ₹4,999ಕ್ಕೆ ಹೊಸ ಮತ್ತು 2ಜಿಬಿ+16 ಜಿಬಿಯಿಂದ ‌2ಜಿಬಿ+32ಜಿಬಿಗೆ ಮೇಲ್ದರ್ಜೆಗೇರಿಸಿದ ಐಟೆಲ್‌ ಎ46 ಸ್ಮಾರ್ಟ್‌ಫೋನ್ ಖರೀದಿಸಬಹುದು.

ಸುಧಾರಿತ ಎಐ ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್, ಡ್ಯುಯಲ್ 4ಜಿ ವೋಲ್ಟ್‌, ಆಂಡ್ರಾಯ್ಡ್‌ 9 ಒಎಸ್ ಮತ್ತು 2ಜಿಬಿ ರ‍್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೊರೇಜ್‌ ಸೌಲಭ್ಯಗಳನ್ನು ಹೊಂದಿದೆ. 128 ಜಿಬಿವರೆಗೆ ವಿಸ್ತರಣೆಗೂ ಅವಕಾಶ ಇದೆ.
 

ಪ್ರತಿಕ್ರಿಯಿಸಿ (+)