ವಾಷಿಂಗ್ಟನ್: ಅಮೆರಿಕದ ಖ್ಯಾತ ಉದ್ಯಮಿ ಬಿಲಿಯನೇರ್ ಥಾಮಸ್ ಲೀ (78) ಅವರು ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಥಾಮಸ್, ತನ್ನ ಹೂಡಿಕೆ ಸಂಸ್ಥೆಯ ಪ್ರಧಾನ ಕಛೇರಿಯಾದ ಫಿಫ್ತ್ ಅವೆನ್ಯೂ ಮ್ಯಾನ್‌ಹ್ಯಾಟನ್ ಕಛೇರಿಯಲ್ಲಿ ಗುಂಡು ಹಾರಿಸಿಕೊಂಡು ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಚೇರಿಯ ಶೌಚಾಲಯದಲ್ಲಿ ಥಾಮಸ್, ಗುಂಡು ಹಾರಿಸಿಕೊಂಡು ಕುಸಿದು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಥಾಮಸ್ ಅವರ ಸಾವಿನಿಂದ ಕುಟುಂಬ ತುಂಬಾ ದುಃಖಿತವಾಗಿದೆ. ಜಗತ್ತು ಅವರನ್ನು ಖಾಸಗಿ ಇಕ್ವಿಟಿ ವ್ಯವಹಾರದ ಪ್ರವರ್ತಕರಲ್ಲಿ ಒಬ್ಬರು ಮತ್ತು ಯಶಸ್ವಿ ಉದ್ಯಮಿ ಎಂದು ತಿಳಿದಿತ್ತು. ನಾವು ಅವರನ್ನು ನಿಷ್ಠಾವಂತ ಪತಿ, ತಂದೆ, ಅಜ್ಜ, ಒಡಹುಟ್ಟಿದ ಸಹೋದರ, ಸ್ನೇಹಿತ ಮತ್ತು ಪರೋಪಕಾರಿ ಎಂದು ತಿಳಿದಿದ್ದೇವೆ, ಅವರು ಯಾವಾಗಲೂ ಇತರರ ಅಗತ್ಯಗಳನ್ನು ತನ್ನ ಸ್ವಂತಕ್ಕಿಂತ ಮೊದಲು ಈಡೇರಿಸುತ್ತಿದ್ದರು ಎಂದು ಥಾಮಸ್ ಲೀ ಅವರ ಕುಟುಂಬದ ಸ್ನೇಹಿತ ಮತ್ತು ವಕ್ತಾರ ಮೈಕೆಲ್ ಸಿಟ್ರಿಕ್ ಹೇಳಿಕೆ ನೀಡಿರುವುದಾಗಿ ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.
2006ರಲ್ಲಿ ಥಾಮಸ್ ಲೀ ಅವರು ಸ್ಥಾಪಿಸಿದ ‘ಲೀ ಇಕ್ವಿಟಿ’ಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಈ ಹಿಂದೆ 1974ರಲ್ಲಿ ಸ್ಥಾಪಿಸಿದ ಥಾಮಸ್ ಎಚ್. ಲೀ ಪಾಲುದಾರರ ಅಧ್ಯಕ್ಷ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ಕಳೆದ 46 ವರ್ಷಗಳಲ್ಲಿ, ವಾರ್ನರ್ ಮ್ಯೂಸಿಕ್ ಮತ್ತು ಸ್ನ್ಯಾಪಲ್ ಪಾನೀಯಗಳಂತಹ ಪ್ರಸಿದ್ಧ ಬ್ರ್ಯಾಂಡ್‌ಗಳ ಖರೀದಿ ಮತ್ತು ನಂತರದ ಮಾರಾಟ ಸೇರಿದಂತೆ ನೂರಾರು ಡೀಲ್‌ಗಳಲ್ಲಿ 15 ಶತಕೋಟಿಗೂ ಹೆಚ್ಚು ಹೂಡಿಕೆ ಮಾಡುವುದರಲ್ಲಿ ಪ್ರಾಮುಖ ಪಾತ್ರವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.