3
ಅಮೆರಿಕದ ಸುಂಕ ಏರಿಕೆ ಕ್ರಮಕ್ಕೆ ಚೀನಾದಿಂದ ತಕ್ಷಣವೇ ಪ್ರತೀಕಾರ

ಚೀನಾ, ಅಮೆರಿಕ ಮಧ್ಯೆ ವಾಣಿಜ್ಯ ಸಮರ ಆರಂಭ

Published:
Updated:

ವಾಷಿಂಗ್ಟನ್‌ / ಬೀಜಿಂಗ್‌: ವಿಶ್ವದ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಮಧ್ಯೆ ಶುಕ್ರವಾರ ವಾಣಿಜ್ಯ ಸಮರ ಆರಂಭವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಈ ವಾಣಿಜ್ಯ ಸಮರಕ್ಕೆ ಚಾಲನೆ ನೀಡಿದ್ದಾರೆ.  ಚೀನಾದ ಸರಕುಗಳ ವಿರುದ್ಧ ಶೇ 25 ರಷ್ಟು ಆಮದು ಸುಂಕ ವಿಧಿಸಲಾಗಿದೆ. ಇದರಿಂದ ಚೀನಾಕ್ಕೆ ಒಟ್ಟು ₹ 2.31 ಲಕ್ಷ ಕೋಟಿಯಷ್ಟು ವಹಿವಾಟು ನಷ್ಟ ಉಂಟಾಗಲಿದೆ.

ಅಮೆರಿಕವು ಚೀನಾದ  ಎಲೆಕ್ಟ್ರಾನಿಕ್ಸ್‌, ಎಲ್‌ಇಡಿ, ವಾಹನ, ಕಂಪ್ಯೂಟರ್‌ ಹಾರ್ಡ್‌ ಡ್ರೈವ್ ಒಳಗೊಂಡು ಭಾರಿ ಯಂತ್ರೋಪಕರಣಗಳ ಮೇಲೆ ಆಮದು ಸುಂಕ ವಿಧಿಸಿದೆ. ಅಮೆರಿಕದಿಂದ ಆಮದಾಗುವ ಸೋಯಾಬೀನ್‌, ವಿದ್ಯುತ್‌ ಚಾಲಿತ ವಾಹನಗಳನ್ನೂ ಒಳಗೊಂಡು ಇನ್ನೂ ಹಲವು ಸರಕುಗಳ ಮೇಲೆ ಚೀನಾ ಸುಂಕ ಹೇರಿದೆ.

ಶುಕ್ರವಾರದಿಂದ ಜಾರಿಗೆ ಬಂದಿರುವ ಈ ಸುಂಕವು  ವಾಣಿಜ್ಯ ಸಮರದ ಆರಂಭದ ಮೊದಲ ಹಂತವಾಗಿದೆಯಷ್ಟೆ. ಈ ವಾಣಿಜ್ಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

*
ಬೆದರಿಕೆಗೆಲ್ಲಾ ನಾವು ಮಣಿಯುವುದಿಲ್ಲ. ನಮ್ಮ ಸ್ಥಾನ ಸ್ಥಿರವಾಗಿದೆ. ನಮ್ಮ ನಿರ್ಧಾರದಲ್ಲಿ ಸ್ಪಷ್ಟತೆ ಇದೆ.
-ಲು ಕಾಂಗ್‌, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !