ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ₹985 ಕೋಟಿ ಮರುಪಾವತಿ ನೀಡಿ: ಏರ್‌ ಇಂಡಿಯಾಗೆ ಅಮೆರಿಕ ಸರ್ಕಾರ ಆದೇಶ

Last Updated 15 ನವೆಂಬರ್ 2022, 6:49 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪ್ರಯಾಣಿಕರಿಗೆ ನೀಡಬೇಕಾಗಿರುವ ಸುಮಾರು ₹985 ಕೋಟಿ ಮರುಪಾವತಿ ನೀಡಿ ಎಂದು ಟಾಟಾ ಸಮೂಹ ಮಾಲೀಕತ್ವದ ಏರ್‌ ಇಂಡಿಯಾಗೆ ಅಮೆರಿಕ ಸಾರಿಗೆ ಸಚಿವಾಲಯವು ಆದೇಶಿಸಿದೆ.

ಜತೆಗೆ ಮರುಪಾವತಿ ವಿಳಂಬ ಮಾಡಿದ್ದಕ್ಕೆ ಸುಮಾರು ₹11.40 ಕೋಟಿ ದಂಡವನ್ನೂ ವಿಧಿಸಲಾಗಿದೆ.

ಏರ್‌ ಇಂಡಿಯಾ ಸೇರಿ ಒಟ್ಟು 6 ವಿಮಾನಯಾನ ಕಂಪನಿಗಳಿಗೆ ₹4885 ಕೋಟಿ ಮಿಲಿಯನ್‌ ಡಾಲರ್‌ ಗ್ರಾಹಕರಿಗೆ ಮರುಪಾವತಿ ಮಾಡಬೇಕು ಎಂದು ಅಮೆರಿಕದ ಸಾರಿಗೆ ಸಚಿವಾಲಯ ನಿರ್ದೇಶಿಸಿದೆ.

ವಿಮಾನ ರದ್ದಾದಾಗ ಅಥವಾ ವಿಮಾನ ಬದಲಾವಣೆಯಾದಾಗ ವಿಮಾನಯಾನ ಕಂಪನಿಗಳು ಗ್ರಾಹಕರಿಗೆ ಟಿಕೆಟ್‌ ಮೊತ್ತವನ್ನು ಮರುಪಾವತಿಮಾಡಬೇಕು. ಆದರೆ ಮಾರುಪಾವತಿಗೆ ಏರ್‌ ಇಂಡಿಯಾ ವಿಳಂಬ ಮಾಡಿದೆ. ಹೀಗಾಗಿ ಮರುಪಾವತಿಮೊತ್ತದ ಜತೆಗೆ ದಂಡವನ್ನೂ ಪಾವತಿಸಿ ಎಂದು ಏರ್‌ ಇಂಡಿಯಾಗೆ ಆದೇಶಿಸಲಾಗಿದೆ.

ಮರುಪಾವತಿಸಂಬಂಧ ಏರ್‌ ಇಂಡಿಯಾ ವಿರುದ್ಧ ಸಲ್ಲಿಕೆಯಾಗಿದ್ದ 1900 ದೂರುಗಳ ಪೈಕಿ, ಶೇ 50ಕ್ಕೂ ಹೆಚ್ಚು ‌ಗ್ರಾಹಕರಿಗೆ ಮರುಪಾವತಿಮಾಡಲು 100ಕ್ಕೂ ಅಧಿಕ ದಿನಗಳನ್ನು ತೆಗೆದುಕೊಂಡಿತ್ತು ಎಂದು ತನಿಖೆಯಿಂದ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT