ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗರೇಕೆ ವಾಹನ ವಿಮೆ ಕಾನೂನು ಉಲ್ಲಂಘಿಸುತ್ತಿದ್ದಾರೆ?

Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ನಮ್ಮಲ್ಲನೇಕರಿಗೆ ವಿಮೆಯ ಮಹತ್ವ ಹಾಗೂ ಅದು ನಮ್ಮನ್ನು ಹೇಗೆ ಸುರಕ್ಷಿತಗೊಳಿಸುತ್ತದೆ ಎಂಬುದು ಅರಿವಾಗಿಲ್ಲ. ಇತ್ತೀಚಿನ ಐಆರ್‌ಡಿಎಐ (ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ) ವರದಿಯೊಂದರ ಪ್ರಕಾರ ಬೆಂಗಳೂರಿನಲ್ಲಿ 56 ಪ್ರತಿಶತ ದ್ವಿಚಕ್ರ ವಾಹನ ಮಾಲೀಕರು ವಿಮೆ ಹೊಂದದೆ ಕಾನೂನು ಉಲ್ಲಂಘಿಸುತ್ತಿದ್ದಾರೆ. ವಾಹನ ವಿಮಾ ಕಾಯ್ದೆಯಡಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯಗೊಳಿಸಿದ್ದಾರೆ ಹಾಗೂ ಅದು ಕೇವಲ 750 ರೂಪಾಯಿಗೆ ಲಭ್ಯವಿದೆ. ದ್ವಿಚಕ್ರ ವಾಹನಕ್ಕೆ ವಿಮೆ ಹೊಂದಿಲ್ಲದಿದ್ದಲ್ಲಿ ಸಿಕ್ಕಿಬಿದ್ದರೆ, 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಇದು ವಿಮೆಯ ಪ್ರೀಮಿಯಂ ಮೊತ್ತಕ್ಕಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ. ಹೀಗಿದ್ದರೂ ಬೆಂಗಳೂರಿನಲ್ಲಿ ಬಹುತೇಕ ದ್ವಿಚಕ್ರ ವಾಹನ ಮಾಲೀಕರು ವಿಮೆ ಖರೀದಿಸದೇ ವಾಹನ ಚಲಾಯಿಸುತ್ತಿದ್ದಾರೆ.

ಈ ಸಂಖ್ಯೆಗಳು ಏಕೆ ಇಷ್ಟೊಂದು ದೊಡ್ಡದಾಗಿವೆ? ಇದು ಅನೇಕ ಕಾರಣಗಳಿಗಾಗಿ ಇರಬಹುದು. ಇವುಗಳಲ್ಲಿ ಮುಖ್ಯವಾದುದು ನಿಯಮವನ್ನು ಹಾಗೂ ಲಭ್ಯವಿರುವ ಉತ್ಪನ್ನಗಳ ಬಗೆಗಿನ ಅರಿವಿನ ಕೊರತೆ. ವಿಮೆ ಹಣದ ಹಕ್ಕು ಚಲಾಯಿಸುವ ಸಂದರ್ಭದಲ್ಲಿ ಕೆಟ್ಟ ಅನುಭವ ಹೊಂದಿರುವುದೂ ಮತ್ತೊಂದು ಕಾರಣವಿರಬಹುದು.

ಆದರೆ, ಈಗ ದ್ವಿಚಕ್ರ ವಾಹನ ಮಾಲೀಕರು ವಿಮೆ ಎಷ್ಟು ಮಹತ್ವದ್ದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ವಿಮೆ ನಾವು ತಿಳಿದಿರುವಷ್ಟು ಸಂಕೀರ್ಣವೇನಲ್ಲ. ವಾಹನ ವಿಮೆಯಲ್ಲಿ ನಾಲ್ಕು ವಿಧಗಳಿವೆ. ಇವುಗಳಲ್ಲಿ ವಾಹನಕ್ಕಾದ ಹಾನಿಯನ್ನು ರಕ್ಷಿಸಲು ಓನ್ ಡ್ಯಾಮೇಜ್ (ಒಡಿ), ಮೂರನೇ ವ್ಯಕ್ತಿಯ ಜೀವ ಅಥವಾ ಆಸ್ತಿಗಾಗುವ ಹಾನಿಯನ್ನು ರಕ್ಷಿಸಲು ಥರ್ಡ್ ಪಾರ್ಟಿ (ಟಿಪಿ), ಅನಾಮಧೇಯ ಪ್ರಯಾಣಿಕರ ರಕ್ಷಣೆಗಾಗಿ ಅನ್ ನೇಮ್‌ಡ್ ಪ್ಯಾಸೆಂಜರ್ ಪಿಎ ಹಾಗೂ ಮಾಲೀಕರು, ಚಾಲಕರ ಜೀವಕ್ಕಾಗಿ ಪರ್ಸನಲ್ ಆಕ್ಸಿಡೆಂಟ್ (ಪಿಎ). ಒಂದು ಪ್ಯಾಕೇಜ್‌ನಲ್ಲಿ ಮೊದಲು ಮಾರಾಟವಾಗುತ್ತಿದ್ದ ಇವುಗಳನ್ನು ಈಗ ಬಿಡಿ ಬಿಡಿಯಾಗಿ ಕೊಳ್ಳಬಹುದು. ಒಡಿ ವಾಹನಕ್ಕಾದ ಹಾನಿಗೆ ವಿಮೆ ಒದಗಿಸಿದರೆ, ಟಿಪಿ ಚಾಲಕರಿಂದ ಮೂರನೇ ವ್ಯಕ್ತಿಗಾದ ಹಾನಿಗೆ ವಿಮೆ ಒದಗಿಸುತ್ತದೆ. ಟಿಪಿ, ಮೂರನೇ ವ್ಯಕ್ತಿಯ ದೇಹಕ್ಕಾದ ಗಾಯ ಅಥವಾ ಮರಣ ಹೊಂದಿದಾಗ ಜೊತೆಗೆ ಮೂರನೇ ವ್ಯಕ್ತಿಯ ವಾಹನಕ್ಕಾದ ಹಾನಿಗೆ ಪರಿಹಾರ ನೀಡುತ್ತದೆ. ಇದು ಮಾಲೀಕ ಅಥವಾ ಚಾಲಕರಿಗೆ ವೈಯಕ್ತಿಕ ಅಪಘಾತದ ಸಂದರ್ಭದಲ್ಲೂ ವಿಮೆ ಒದಗಿಸುತ್ತದೆ. ಆದರೆ, ಪಾಲಿಸಿ ಹೊಂದಿದವರ ವಾಹನಕ್ಕಾದ ಯಾವುದೇ ಹಾನಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರ ಒದಗಿಸುವುದಿಲ್ಲ.

ಭಾರತದಲ್ಲಿ ಈಗಲೂ ಜನರು ತೆರಿಗೆ ಉಳಿಸಲು ಅಥವಾ ಹೂಡಿಕೆಯಾಗಿ ವಿಮೆ ಖರೀದಿಸುತ್ತಾರೆ. ಆದರೀಗ ವಿಮೆ ರಕ್ಷಣೆಗಾಗಿ ಎಂಬುದನ್ನು ಅವರು ನಿಧಾನವಾಗಿ ಮನಗಾಣುತ್ತಿದ್ದಾರೆ. ವಾಹನ ಚಾಲಕರು 1000 ರೂಪಾಯಿ ದಂಡ ತೆರುವ ಬದಲು ಕೇವಲ 750 ರೂಪಾಯಿಗೆ ಲಭ್ಯವಿರುವ ಥರ್ಡ್ ಪಾರ್ಟಿ ವಿಮೆಯನ್ನು ಖರೀದಿಸುವುದು ಸೂಕ್ತ. ಥರ್ಡ್ ಪಾರ್ಟಿ ವಿಮೆ ಎಷ್ಟು ಕಡಿಮೆ ದರದಲ್ಲಿ ಲಭ್ಯವಿದೆ ಹಾಗೂ ಅದನ್ನು ಹೊಂದುವುದು ಎಷ್ಟು ಮುಖ್ಯ ಎಂಬ ಅರಿವಿನ ಕೊರತೆ ಇದೆ.

– ಮಲ್ಲೇಶ್‌ ರೆಡ್ಡಿ, ಸಹ ಸಂಸ್ಥಾಪಕ ಹಾಗೂ ಸಿಇಒ, ಇನ್ಶೂರ್‌ಮೇಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT