ವೇಮಗಲ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಉದ್ಭವಿಸಿದ್ದ ಅಡುಗೆ ಅನಿಲ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಕ್ಕೆ ಇದೀಗ ತರಕಾರಿ ಬೆಲೆ ಏರಿಕೆ ಬಿಸಿ ತಟ್ಟಿದೆ.

ಕಳೆದ ಕೆಲವು ದಿನಗಳಿಂದ ಅಕಾಲಿಕ ಮಳೆಯಾಗಿದ್ದರಿಂದಾಗಿ ಕೃಷಿ ಕ್ಷೇತ್ರವು ತತ್ತರಿಸಿದ್ದು, ವೇಮಗಲ್ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ 15 ದಿನಗಳಿಂದ ತರಕಾರಿ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಗ್ರಾಹಕರು ಮಾರುಕಟ್ಟೆಗೆ ಹೋಗಿ ತರಕಾರಿ ತರಲು ಹಿಂದೇಟು ಹಾಕುವಂತಾಗಿದೆ. ವಾಣಿಜ್ಯ ಬಳಕೆಯ ಅಡುಗೆ ಅನಿಲ ದರ ಏರಿಕೆಯ ಬಿಸಿಯಿಂದ ತತ್ತರಿಸಿದ್ದ ಹೋಟೆಲ್ ಉದ್ಯಮಕ್ಕೆ ಇದೀಗ ತರಕಾರಿ ದರ ದುಬಾರಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

2 ವಾರಗಳ ಹಿಂದೆ ಕೆ.ಜಿಗೆ ₹60 ಇದ್ದ ಉತ್ತಮ ಗುಣಮಟ್ಟದ ನಾಟಿ ಬೀನ್ಸ್ ದರ ಇಂದು ಇದೀಗ ₹160ಕ್ಕೆ ತಲುಪಿದೆ. ₹500 ವೆಚ್ಚ ಮಾಡಿದರೂ, ತರಕಾರಿಗಳು ಅರ್ಧ ಚೀಲ ತುಂಬುತ್ತಿಲ್ಲ ಎಂದು ಗೃಹಿಣಿಯರು ಅಳಲು ತೋಡಿಕೊಂಡಿದ್ದಾರೆ. ಟೊಮೆಟೊ ಕೆ.ಜಿಗೆ ₹50, ಕ್ಯಾರೆಟ್ ₹80, ಬೀಟ್ರೂಟ್ ₹60, ಹೀರೆಕಾಯಿ ₹80, ಆಲೂಗಡ್ಡೆ ₹40, ಬೆಂಡೆಕಾಯಿ ₹60, ಸೌತೆಕಾಯಿ ₹50ಕ್ಕೆ ಮಾರಾಟವಾಗುತ್ತಿವೆ. ಕ್ಯಾಪ್ಸಿಕಂ ದರ ಕೆ.ಜಿಗೆ ₹80ಕ್ಕೆ ಏರಿಕೆಯಾಗಿದೆ. ಒಂದು ಮಾಧ್ಯಮ ಗಾತ್ರದ ನಿಂಬೆಹಣ್ಣು ₹12-₹15ಗೆ ಬಿಕರಿಯಾಗುತ್ತಿದೆ. ಕೊತ್ತಂಬರಿ ಸೊಪ್ಪು ಒಂದು ಮಧ್ಯಮ ಗಾತ್ರದ ಕಟ್ಟು ₹80-₹100ಗೆ ಮಾರಾಟವಾಗುತ್ತಿದೆ. ಈರುಳ್ಳಿ ಮಾತ್ರ ಕೆಜಿಗೆ ₹30ಕ್ಕೆ ಸಿಗುತ್ತಿದೆ.

ಬೆಲೆ ಏರಿಕೆಯು ವೇಮಗಲ್ ಪಟ್ಟಣದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪಟ್ಟಣದ ಪ್ರಮುಖ 3-4 ಹೋಟೆಲ್ಗಳು ವಾಣಿಜ್ಯ ಸಿಲಿಂಡರ್ ಸಿಗದೆ ತಾತ್ಕಾಲಿಕವಾಗಿ ಮುಚ್ಚಿವೆ. ಈಗ ತರಕಾರಿ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರದ ಬೆಲೆ ಏರಿಸಿದರೆ ಗ್ರಾಹಕರು ಬರುವುದಿಲ್ಲ. ಬೆಲೆ ಏರಿಸದಿದ್ದರೆ ಉದ್ಯಮ ನಡೆಸಲು ಸಾಧ್ಯವಿಲ್ಲ ಎಂಬ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ ಹೋಟೆಲ್ ಉದ್ಯಮಿಗಳು. ಸಂಜೆ ವೇಳೆ ಸಣ್ಣ ತಳ್ಳುಗಾಡಿಗಳಲ್ಲಿ ಬಜ್ಜಿ, ಬೋಂಡಾ ಮತ್ತು ಟಿಫನ್ ವ್ಯಾಪಾರ ಮಾಡಿಕೊಂಡಿದ್ದ ಸಣ್ಣ ವ್ಯಾಪಾರಿಗಳು ಸಿಲಿಂಡರ್ ಕೊರತೆ ಮತ್ತು ತರಕಾರಿ ದರಗಳ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದೆ ವ್ಯಾಪಾರವನ್ನೇ ಸ್ಥಗಿತಗೊಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-18-271987209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.