ವಿಜಯ ಬ್ಯಾಂಕ್‌ ಲಾಭ ₹ 143 ಕೋಟಿ

7
ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶ

ವಿಜಯ ಬ್ಯಾಂಕ್‌ ಲಾಭ ₹ 143 ಕೋಟಿ

Published:
Updated:
Prajavani

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ
₹ 143 ಕೋಟಿ ನಿವ್ವಳ ಲಾಭ ಗಳಿಸಿದೆ.

‘ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ₹ 79.56 ಲಕ್ಷ ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 80ರಷ್ಟು ಹೆಚ್ಚಾಗಿದೆ’ ಎಂದು ಬ್ಯಾಂಕ್‌ನ ಸಿಇಒ ಆರ್‌.ಎ. ಶಂಕರ ನಾರಾಯಣನ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಂಕ್‌ನ ಒಟ್ಟಾರೆ ವರಮಾನ ₹ 3,451 ಕೋಟಿಯಿಂದ ₹4,106 ಕೋಟಿಗೆ ಏರಿಕೆಯಾಗಿದೆ.

ಸರಾಸರಿ ಎನ್‌ಪಿಎ ಶೇ 6.17 ರಿಂದ ಶೇ 6.14ಕ್ಕೆ ಅಲ್ಪ ಇಳಿಕೆ ಕಂಡಿದೆ. ಆದರೆ, ನಿವ್ವಳ ಎನ್‌ಪಿಎ ಶೇ 3.99ರಿಂದ
ಶೇ 4ಕ್ಕೆ ಅಲ್ಪ ಏರಿಕೆಯಾಗಿದೆ.

ಬ್ಯಾಂಕ್‌ ಆಫ್‌ ಬರೋಡಾ ಹೆಸರು!

ಮೂರು ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ರಚನೆಯಾಗಲಿರುವ ಹೊಸ ಬ್ಯಾಂಕ್‌ಗೆ ಬ್ಯಾಂಕ್‌ ಆಫ್ ಬರೋಡಾದ ಹೆಸರನ್ನೇ ಇಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಿಜಯ ಬ್ಯಾಂಕ್‌ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಹೀಗಿರುವಾಗ, ವಿಜಯ ಬ್ಯಾಂಕ್‌ ಹೆಸರನ್ನೇ ಉಳಿಸಿಕೊಳ್ಳಬಹುದಲ್ಲಾ. ಈ ಬಗ್ಗೆ ಬ್ಯಾಂಕ್‌ ಆಡಳಿತ ಮಂಡಳಿ ಸರ್ಕಾರಕ್ಕೆ ಒತ್ತಾಯಿಸಿದೆಯೇ ಎನ್ನುವ ಪ್ರಶ್ನೆಗೆ, ‘ಸಕಾರಾತ್ಮಕ ಸಲಹೆಗಳನ್ನು ನೀಡಿದ್ದೇವೆ. ಆದರೆ, ಬ್ಯಾಂಕ್‌ ಆಫ್‌ ಬರೋಡಾ ಹೆಸರನ್ನೇ ಇಡಲು ಸರ್ಕಾರ ನಿರ್ಧರಿಸಿದೆ. ಇಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !