ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ: ಶ್ರೀಕೃಷ್ಣ ದೇಗುಲ ಜೀರ್ಣೋದ್ಧಾರ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಸಿಂಗಪುರ: ಇಲ್ಲಿನ 148 ವರ್ಷ ಹಳೆಯದಾದ ಶ್ರೀಕೃಷ್ಣ ದೇಗುಲದಲ್ಲಿ‌ ‘ಮಹಾ ಸಂಪ್ರೋಕ್ಷಣಾ’ ಜೀರ್ಣೋದ್ಧಾರ ಕಾರ್ಯಕ್ರಮ ನಡೆಸಲಾಗುತ್ತಿದೆ.

48 ದಿನಗಳ ಈ ಕಾರ್ಯಕ್ರಮ ಸೋಮವಾರ ಆರಂಭವಾಗಿದೆ. ಮಾಹಿತಿ ಮತ್ತು ಸಂವಹನ ಸಚಿವ ಎಸ್. ಈಶ್ವರನ್ ಹಾಗೂ ಕಾರ್ಯಕ್ರಮ ನಡೆಸಿಕೊಡುವ ಅರ್ಚಕರು ಭಾರತದಿಂದ ಬಂದಿದ್ದಾರೆ. ಸುಮಾರು 10 ಸಾವಿರ ಭಕ್ತಾದಿಗಳು ಪಾಲ್ಗೊಂಡಿದ್ದಾರೆ.

ಕಲಾವಿದರು ಹಾಗೂ ತಾಂತ್ರಿಕ ಸಲಹೆಗಾರರ ಸಹಕಾರದಿಂದ ದೇಗುಲ ಸಮಿತಿ ನಾಲ್ಕು ವರ್ಷಗಳಿಂದ ನವೀಕರಣ ಕಾರ್ಯ ನಡೆಸುತ್ತಿತ್ತು ಎಂದು ದಿ ಸ್ಟ್ರೇಟ್ಸ್ ಟೈಮ್ಸ್ ವರದಿ ಮಾಡಿದೆ.

1870ರಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿ (ಇಂದಿನ ವಾಟರ್‌ ಲೂ ಸ್ಟ್ರೀಟ್) ನಿರ್ಮಾಣಗೊಂಡಿರುವ ಈ ದೇಗುಲವನ್ನು ಸಂರಕ್ಷಿಸಲು 2014ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.

ಸಿಂಗಪುರದಲ್ಲಿ ಭಾರತೀಯ ವಲಸಿಗರು 100 ವರ್ಷಗಳ ಹಿಂದೆ ನಿರ್ಮಿಸಿರುವ ಹಲವು ಹಿಂದೂ ದೇಗುಲಗಳಲ್ಲಿ ಪ್ರತಿ 12ರಿಂದ 15 ವರ್ಷಗಳಿಗೊಮ್ಮೆ ‘ಮಹಾ ಸಂಪ್ರೋಕ್ಷಣಾ’ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT