ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಸಿ ರಸ್ತೆ ಕಾಮಗಾರಿ ಶೀಘ್ರ ಆರಂಭ’

Last Updated 19 ಮೇ 2018, 9:07 IST
ಅಕ್ಷರ ಗಾತ್ರ

ಸಿಂಧನೂರು: ‘ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಹಿಂದಿನ ಶಾಸಕ ಹಂಪನಗೌಡ ಬಾದರ್ಲಿ ಅವರು ₹ 3.50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಕಾಮಗಾರಿ ಆರಂಭಿಸಿರಲಿಲ್ಲ. ಶೀಘ್ರದಲ್ಲಿ ಸಿಸಿ ರಸ್ತೆ ಆರಂಭಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಾಯತ್‍ರಾಜ್ ಇಲಾಖೆಗೆ ಕಾಮಗಾರಿ ವಹಿಸಲಾಗಿದೆ. ಎಚ್‍ಕೆಆರ್‌ಡಿಬಿ ಯೋಜನೆಯಡಿಯಲ್ಲಿ ₹ 8.35 ಕೋಟಿ ಬಿಡುಗಡೆಯಾಗಿದ್ದು, ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆಯನ್ನು ಪ್ರಾರಂಭಿಸ ಲಾಗುವುದು. ₹ 1.80 ಕೋಟಿ ಪಂಚಾಯತ್‍ರಾಜ್ ಇಲಾಖೆಗೆ, ₹ 6.55 ಕೋಟಿ ಹಣದಿಂದ ಲೋಕೋಪ ಯೋಗಿ ಇಲಾಖೆ ಯಿಂದ ಕಾಮಗಾರಿ ಕೈಗೆತ್ತಿಕೊಳ್ಳ ಲಾಗುತ್ತಿದೆ. ಅಲ್ಲದೇ, ಎರಡು ಮತ್ತು ಮೂರನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ಡಾಂಬರ್ ರಸ್ತೆ ನಿರ್ಮಿಸಲು ಈಗಾಗಲೇ ಟೆಂಡರ್ ಆಗಿದ್ದು, ಈ ಕಾಮಗಾರಿಗಳನ್ನು ಸಹ ಪ್ರಾರಂಭಿಸಲಾಗುವುದು’ ಎಂದರು.

‘ಮನೆರಹಿತರು ಮತ್ತು ನಿವೇಶನರಹಿತ ಕುಟುಂಬಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಬಪ್ಪೂರು ರಸ್ತೆಯಲ್ಲಿ 18 ಎಕರೆ ಮತ್ತು ಸುಕಾಲಪೇಟೆ ಕೆಳಭಾಗದಲ್ಲಿ 11 ಎಕರೆ ಜಮೀನು ಖರೀದಿಸಲಾಗಿದೆ. ಗಂಗಾನಗರ, ಜನತಾಕಾಲೊನಿ, ಇಂದಿರಾನಗರ, ಎ.ಕೆ.ಗೋಪಾಲನಗರ ಮತ್ತು ಏಳರಾಗಿಕಾಂಪ್ ನಿವಾಸಿಗಳಿಗೆ ಕೊಡುವ ಉದ್ದೇಶವಿರುವುದಾಗಿ’ ಎಂದು ನಗರಸಭೆ ಸದಸ್ಯ ಪ್ರಭುರಾಜ್ ಹೇಳಿದರು.

‘ಕಾಲುವೆ ನೀರಿನ ವಿಷಯದಲ್ಲಿ ರೈತರಿಗಾದ ತೊಂದರೆಯನ್ನು ವಿರೋಧ ಪಕ್ಷಗಳು ಹಂಪನಗೌಡರನ್ನೆ ಹೊಣೆ ಮಾಡಿ ವಿಪರೀತವಾದ ಸುಳ್ಳು ಹೇಳುವ ಮೂಲಕ ರೈತರಲ್ಲಿ ಅಸಮಾಧಾನ ಸೃಷ್ಟಿಸಿದ್ದರಿಂದ ಹಂಪನಗೌಡರು ಪರಾಭವಗೊಳ್ಳಬೇಕಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ನಬಿಸಾಬ, ಸದಸ್ಯ ವೆಂಕಟೇಶ ಬಂಡಿ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT