ವಿಜಯಪುರ: ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹16,367.83 ಕೋಟಿ ವಾರ್ಷಿಕ ಸಾಲ ಯೋಜನೆ ಗುರಿ ಹೊಂದಲಾಗಿದ್ದು, ಕೃಷಿ ಹಾಗೂ ಉದ್ಯಮ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಸಿಇಒ ರಿಷಿ ಆನಂದ ಹೇಳಿದರು.

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಗುರಿ ನಿಗದಿ ಮೊದಲಾದ ವಿಷಯಗಳ ಬಗ್ಗೆ ಬುಧವಾರ ಜಿ.ಪಂ. ಸಭಾಂಗಣದಲ್ಲಿ ಸಿಇಒ ರಿಷಿ ಆನಂದ ಅಧ್ಯಕ್ಷತೆಯಲ್ಲಿ ನಡೆದ ಅಗ್ರಣೀಯ ಬ್ಯಾಂಕ್ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ಬಾರಿಗಿಂತ ಈ ಬಾರಿ ಶೇ.10.90 ಹೆಚ್ಚಿನ ಗುರಿಯನ್ನು ಹೊಂದಲಾಗಿದೆ ಎಂದರು.

ಪ್ರಸ್ತುತ ವರ್ಷದ ಸಾಲ ಯೋಜನೆಯ ₹16367.83 ಕೋಟಿ ವಿತರಣೆಯ ಗುರಿಯನ್ನು ಹೊಂದಿದೆ. ಆದ್ಯತಾ ವಲಯಕ್ಕೆ ಯೋಜನೆಯ ಶೇ. 69.59 ರಷ್ಟು ಅಂದರೆ ₹11389.96 ಕೋಟಿ ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ ಒಟ್ಟು ಯೋಜನೆಯ ಶೇ. 51.46 ರಷ್ಟು ಅಂದರೆ ₹8422.71 ಕೋಟಿ ಮೀಸಲಿಡಲಾಗಿದೆ. ಉದ್ಯಮಿ ವಲಯಕ್ಕೆ ಒಟ್ಟು ಯೋಜನೆಯ ಯೋಜನೆಯ ಶೇ. 16.90 ಅಂದರೆ ₹2765.48 ಕೋಟಿ ಮೀಸಲಿಡಲು. ತೀರ್ಮಾನಿಸಲಾಯಿತು.

ಶಿಕ್ಷಣ ಸಾಲ ₹53.43 ಕೋಟಿ, ವಸತಿ ಸಾಲ ₹94.07 ಕೋಟಿ ಮತ್ತು ಇತರೆ ಸಾಲ ₹28.84 ಕೋಟಿ ಸಾಲದ ಗುರಿ ಹೊಂದಲಾಗಿದೆ. ಕಳೆದ ಸಾಲಿನ ವಾರ್ಷಿಕ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಅಗ್ರಣಿ ಬ್ಯಾಂಕ್ ಮುಖ್ಯ ಪ್ರಬಂಧಕ ಕೆ ಸಿದ್ದಯ್ಯ, ಸಾಲ ಮತ್ತು ಠೇವಣಿಯ ಅನುಪಾತ ಶೇ. 106 ಆಗಿದ್ದು, ಅತ್ಯುತ್ತಮ ಗುರಿ ಸಾಧನೆ ಎಂದರು.

ನಬಾರ್ಡ್ ಡಿ.ಡಿ.ಎಂ. ವಿಕಾಸ ರಾಠೋಡ, ಕೆನರಾ ಬ್ಯಾಂಕ್ ವಿಭಾಗಿಯ ಪ್ರಬಂಧಕ ದೀಪಕ್ ಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ ಸೋಂಗರಿ, ಮುಖ್ಯ ವ್ಯವಸ್ಥಾಪಕ ವಿ.ಬಿ. ಕುಲಕರ್ಣಿ, ಎಸ್ ಬಿ ಐ ಮುಖ್ಯವಸ್ಥಾಪಕ ಹರೀಶ್ ನಾಯಕ, ವಿನೋದ್ ಮಾದರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಅನಿಲ ಮಹಾಕಾಳಿ, ಡಿಸಿಸಿ ಬ್ಯಾಂಕ್ ಪ್ರಬಂಧಕ ರಮೇಶ್ ಹಿಟ್ಟನಹಳ್ಳಿ ಸೇರಿದಂತೆ ವಿವಿಧ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-26-1787188515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.