ಸಿಂಘಾನಿಯಾ ಆತ್ಮಚರಿತ್ರೆ ಬಿಡುಗಡೆಗೆ ತಡೆ

ಗುರುವಾರ , ಏಪ್ರಿಲ್ 25, 2019
33 °C

ಸಿಂಘಾನಿಯಾ ಆತ್ಮಚರಿತ್ರೆ ಬಿಡುಗಡೆಗೆ ತಡೆ

Published:
Updated:
Prajavani

ಮುಂಬೈ: ಉದ್ಯಮಿ ವಿಜಯ್‌ಪತ್‌ ಸಿಂಘಾನಿಯಾ ಅವರು ತಮ್ಮ ಆತ್ಮಚರಿತ್ರೆ ‘ದ ಇನ್‌ಕಂಪ್ಲೀಟ್‌ ಮ್ಯಾನ್‌’ ಅನ್ನು ಇದೇ 25ರವರೆಗೆ ಬಿಡುಗಡೆ ಮಾಡದಂತೆ ಬಾಂಬೆ ಹೈಕೋರ್ಟ್‌ ನಿರ್ಬಂಧಿಸಿದೆ.

ಪುಸ್ತಕ ಬಿಡುಗಡೆಗೆ ತಡೆ ಕೋರಿ ರೇಮಂಡ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯೂ ಸೇರಿದಂತೆ ಅಂತಿಮ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿ ಸಂದೀಪ್‌ ಶಿಂಧೆ ಅವರು ಠಾಣೆಯ ಸಿವಿಲ್ ಕೋರ್ಟ್‌ಗೆ ನಿರ್ದೇಶನ ನೀಡಿದ್ದಾರೆ.

ಆತ್ಮಚರಿತ್ರೆಯಲ್ಲಿನ ಮಾಹಿತಿಯು ಮಾನಹಾನಿ ಸ್ವರೂಪದಲ್ಲಿ ಇರುವುದರಿಂದ ಅದರ ಪ್ರಕಟಣೆಗೆ ಅವಕಾಶ ನೀಡಬಾರದು ಎಂದು ರೇಮಂಡ್‌ ಸಂಸ್ಥೆಯು 2018ರ ಸೆಪ್ಟೆಂಬರ್‌ನಲ್ಲಿ ಠಾಣೆ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ವಿಜಯ್‌ಪತ್‌ ಸಿಂಘಾನಿಯಾ ಮತ್ತು ಅವರ ಮಗ ಗೌತಂ ಸಿಂಘಾನಿಯಾ ಅವರ ಮಧ್ಯೆ ಡ್ಯುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !