ವಿಟ್ಲ: ಇಲ್ಲಿನ ಗ್ರಾಮೀಣ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ₹ 1090 ಕೋಟಿ ವ್ಯವಹಾರ ನಡೆಸಿ, ₹ 4.05 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಜಗನ್ನಾಥ ಸಾಲಿಯಾನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮ ಹೊರತು ಉಳಿದ ತಾಲ್ಲೂಕುಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದ್ದು, ವಿಟ್ಲದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್ ಮತ್ತು ಪುತ್ತೂರಿನಲ್ಲಿ ಶಾಖೆಗಳಿದ್ದು, 9189 ಸದಸ್ಯರಿದ್ದಾರೆ. ₹ 3.04 ಕೋಟಿ ಪಾಲು ಬಂಡವಾಳ ಇದ್ದು, ಕಳೆದ ಸಾಲಿನ ವ್ಯವಹಾರಕ್ಕಿಂತ ಈ ಸಾಲಿನಲ್ಲಿ ₹ 226 ಕೋಟಿ ಹೆಚ್ಚು ವ್ಯವಹಾರ ನಡೆಸಿ ದಾಖಲೆ ಮಾಡಿದೆ ಎಂದರು.

ಶೇ 95.11ರಷ್ಟು ಸಾಲ ವಸೂಲಾತಿ: ₹ 149.84 ಕೋಟಿ ಠೇವಣಿ ಸಂಗ್ರಹ ಮಾಡಿದ್ದು, ಕಳೆದ ಸಾಲಿಗಿಂತ ಶೇ 11.22ರಷ್ಟು ಹೆಚ್ಚಾಗಿದೆ. ಹೊರಬಾಕಿ ಸಾಲ ₹ 125.63 ಕೋಟಿ ಸಾಲ ವಸೂಲಾತಿ ಶೇ 95.11 ಇದ್ದು, ಕಳೆದ ಸಾಲಿಗಿಂತ ಹೆಚ್ಚು ದಾಖಲಾಗಿದೆ. ಪ್ರಸ್ತುತ ಸಂಘದಲ್ಲಿ ₹ 9.96 ಕೋಟಿ ಮೀಸಲು ನಿಧಿ ಹಾಗೂ ₹ 13.65 ಕೋಟಿಯ ನಿಧಿಗಳಿವೆ. ₹ 4.43 ಕೋಟಿ ಚರ ಮತ್ತು ಸ್ಥಿರಾಸ್ತಿಗಳಿವೆ. ಸಂಘದ ದುಡಿಯುವ ಬಂಡವಾಳ ₹ 180.55 ಕೋಟಿ ಇದೆ. ಕಳೆದ ಸಾಲಿನಲ್ಲಿ ಶೇ 22 ಲಾಭಾಂಶ ನೀಡಲಾಗಿದೆ ಎಂದು ತಿಳಿಸಿದರು.

₹ 160 ಕೋಟಿ ಠೇವಣಿ ಸಂಗ್ರಹದ ಗುರಿ: ಸಂಘವು 2026-27ನೇ ಸಾಲಿನಲ್ಲಿ ₹ 160 ಕೋಟಿ ಅಧಿಕ ಠೇವಣಿ ಸಂಗ್ರಹ, ₹ 135 ಕೋಟಿಗೂ ಮೀರಿ ಸಾಲ ನೀಡಿಕೆ, ₹ 4.45ಕೋಟಿಗೂ ಹೆಚ್ಚಿನ ಲಾಭ ಹಾಗೂ ಶೇ 96 ಸಾಲ ವಸೂಲಾತಿ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಶೀಘ್ರದಲ್ಲೇ ಉಪ್ಪಿನಂಗಡಿ ಶಾಖೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಸಂಘವು ಸತತ ನಾಲ್ಕು ಬಾರಿ ಸಾಧನಾ ಪ್ರಶಸ್ತಿ ಪಡೆದಿದೆ. ಮುಂದಿನ ಕೆಲವೇ ದಿನಗಳಲ್ಲಿ ಸಂಘದ ಐದನೇ ಶಾಖೆಯನ್ನು ಉಪ್ಪಿನಂಗಡಿಯಲ್ಲಿ ಆರಂಭ ಮಾಡಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಮನೋರಂಜನ್ ಕೆ.ಆರ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಮಾಹಿತಿ ನೀಡಿದರು.

ನಿರ್ದೇಶಕರಾದ ಜಯಂತಿ ಎಚ್.ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ., ಪೂವಪ್ಪ ಎಸ್., ದಿವಾಕರ ವಿ., ಕೇಶವ ಎ., ಗೋವರ್ಧನ ಕುಮಾರ್ ಐ., ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ ಕೆ.ಎಸ್., ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ., ಸತೀಶ್ ಪಿ. ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-29-1349076595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.