ವಿಕೆಸಿ ವಾಕರೂ: ಅಮೀರ್‌ ಖಾನ್‌ ಬ್ರ್ಯಾಂಡ್‌ ರಾಯಭಾರಿ

ಬುಧವಾರ, ಮೇ 22, 2019
34 °C

ವಿಕೆಸಿ ವಾಕರೂ: ಅಮೀರ್‌ ಖಾನ್‌ ಬ್ರ್ಯಾಂಡ್‌ ರಾಯಭಾರಿ

Published:
Updated:
Prajavani

ಬೆಂಗಳೂರು: ಪಾದರಕ್ಷೆಗಳನ್ನು ಮಾರಾಟ ಮಾಡುವ ವಿಕೆಸಿ ಸಮೂಹದ ‘ವಾಕರೂ’ ಬ್ರ್ಯಾಂಡ್‌ನ ರಾಯಭಾರಿಯಾಗಿ ಬಾಲಿವುಡ್‌ ನಟ ಅಮೀರ್‌ ಖಾನ್‌ ಆಯ್ಕೆಯಾಗಿದ್ದಾರೆ.

ಯುವಪೀಳಿಗೆಯ ದಿನನಿತ್ಯದ ಬಳಕೆ, ಕ್ರೀಡೆ ಹೀಗೆ ಎಲ್ಲಾ ಅಗತ್ಯಗಳಿಗೆ ತಕ್ಕದಾದ ‌‌ಪಾದರಕ್ಷೆ, ಸ್ಯಾಂಡ್ಸ್‌, ಶೂಗಳು ಈ ಬ್ರ್ಯಾಂಡ್‌ನಲ್ಲಿ ಲಭ್ಯವಿವೆ. ಮಕ್ಕಳು ಮತ್ತು ಮಹಿಳೆಯರಿಗೆಂದೇ ಪ್ರತ್ಯೇಕ ಆಯ್ಕೆಗಳೂ ಇಲ್ಲಿವೆ.

‘ಇಂದಿನ ಯುವ ಪೀಳಿಗೆಯು ಸದಾ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ಕ್ರೀಯಾಶೀಲಾಗಿರಲು ಬಯಸುತ್ತಾರೆ. ಹೀಗಾಗಿ ‘ಬಿ ರೆಸ್ಟ್‌ಲೆಸ್‌’ ಟ್ಯಾಗ್‌ಲೈನ್‌ನೊಂದಿಗೆ ವಾಕರೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಚಿಲ್ಲರೆ ಮಾರಾಟದಲ್ಲಿ ನಾವು ಉತ್ತಮ ಹಿಡಿತ ಹೊಂದಿದ್ದೇವೆ. ಆದರೆ ಡಿಟಿಜಿಲ್‌ ವಹಿವಾಟು ಹೆಚ್ಚುತ್ತಿರುವ ಈ ದಿನಗಳಲ್ಲಿ ಆನ್‌ಲೈನ್‌ ಮಾರಾಟಕ್ಕೂ ಆದ್ಯತೆ ನೀಡಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೌಷದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಕರ್ಷಕ ವಿನ್ಯಾಸ ಮತ್ತು ಕೈಗೆಟುಕುವ ದರ ಇರುವುದರಿಂದ ಉತ್ತಮ ಮಾರಾಟ ಪ್ರಗತಿ ಸಾಧಿಸುವ ವಿಶ್ವಾಸವಿದೆ’ ಎಂದಿದ್ದಾರೆ.

ಒಟ್ಟಾರೆ ₹ 2,300 ಕೋಟಿ ವಹಿವಾಟಿನಲ್ಲಿ ಕ್ರೀಡಾ ಉತ್ಪನ್ನಗಳ ಪಾಲು ₹ 480 ಕೋಟಿ ಇದೆ. ಮುಂದಿನ ವರ್ಷ ₹ 1 ಸಾವಿರ ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !