ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ, ಡೇಟಾ ದರ ಹೆಚ್ಚಳಕ್ಕೆ ವೊಡಾಫೋನ್‌ ಐಡಿಯಾ ಬೇಡಿಕೆ

Last Updated 28 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್‌ ಐಡಿಯಾ ಮೊಬೈಲ್ ಕಂಪನಿಯು ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸುವ ಬೇಡಿಕೆ ಮುಂದಿಟ್ಟಿದೆ.

ಪ್ರತಿ ನಿಮಿಷಕ್ಕೆ 6 ಪೈಸೆ ಮತ್ತುಪ್ರತಿ ಜಿಬಿಗೆ ಸದ್ಯದ ಬೆಲೆ ಮಟ್ಟಕ್ಕಿಂತ ಶೇ 7 ರಿಂದ 8 ಪಟ್ಟು ಹೆಚ್ಚಿಗೆ ಇರುವಂತೆ ಕನಿಷ್ಠ ₹ 35 ರಂತೆ ದರ ನಿಗದಿಪಡಿಸಿದರೆ ಮಾತ್ರ ತನ್ನ ವಹಿವಾಟು ಸುಸ್ಥಿರಗೊಳ್ಳಲಿದೆ.ಸರ್ಕಾರಕ್ಕೆ ಬಾಕಿಪಾವತಿಸಲು ಸಾಧ್ಯವಾಗಲಿದೆ. ಏಪ್ರಿಲ್‌ 1ರಿಂದ ದರ ಹೆಚ್ಚಳಗೊಳ್ಳಬೇಕು ಎಂದು ತಿಳಿಸಿದೆ.

ನಷ್ಟದಲ್ಲಿ ಇರುವ ಕಂಪನಿಯು ಸುಪ್ರೀಂಕೋರ್ಟ್‌ ಆದೇಶದಂತೆ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹ 53 ಸಾವಿರ ಕೋಟಿ ಪಾವತಿಸಬೇಕಾಗಿದೆ. ಬಾಕಿ ಪಾವತಿಸಲು 18 ವರ್ಷಗಳ ಸಮಯ ಕೇಳಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿರ್ಧಾರಕ್ಕೆ ಬರದ ಸಭೆ: ಸಂಕಷ್ಟದಲ್ಲಿ ಇರುವ ದೂರಸಂಪರ್ಕ ಸೇವಾ ವಲಯಕ್ಕೆ ಪರಿಹಾರ ಕೊಡುಗೆ ಒದಗಿಸುವ ಸಂಬಂಧ ಚರ್ಚಿಸಲು ಶುಕ್ರವಾರ ಇಲ್ಲಿ ನಡೆದ ಡಿಜಿಟಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ (ಡಿಸಿಸಿ) ಸಭೆಯಲ್ಲಿ ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT