ಫೋಕ್ಸ್‌ವ್ಯಾಗನ್‌ಗೆ ₹ 500 ಕೋಟಿ ದಂಡ

ಬುಧವಾರ, ಮಾರ್ಚ್ 27, 2019
26 °C

ಫೋಕ್ಸ್‌ವ್ಯಾಗನ್‌ಗೆ ₹ 500 ಕೋಟಿ ದಂಡ

Published:
Updated:

ನವದೆಹಲಿ: ‘ವಂಚನೆ ತಂತ್ರಾಂಶ’ ಬಳಸಿ ಕಾರುಗಳು ಹೊರಸೂಸುವ ಹೊಗೆಯಲ್ಲಿನ ಮಾಲಿನ್ಯ ಕಡಿಮೆ ಎಂದು ಮೋಸ ಮಾಡಿದ ಪ್ರಕರಣದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಗೆ ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ₹ 500 ಕೋಟಿ ದಂಡ ವಿಧಿಸಿದೆ.

ಕಂಪನಿಯು ಭಾರತದಲ್ಲಿ ಮಾರಾಟ ಮಾಡಿದ್ದ ಡೀಸೆಲ್ ಕಾರುಗಳಲ್ಲಿ ಈ ವಂಚನೆ ತಂತ್ರಾಂಶವನ್ನು ಬಳಸಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ಮುಖ್ಯಸ್ಥ, ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನಡೆಸಿದರು.

‘ಈ ರೀತಿ ವಂಚನೆ ಮಾಡಿ ಪರಿಸರಕ್ಕೆ ಮತ್ತು ಜೀವಿಗಳ ಆರೋಗ್ಯಕ್ಕೆ ಹಾನಿ ಮಾಡಿದ ಕಾರಣ ದಂಡ ವಿಧಿಸಲಾಗಿದೆ. ದಂಡದಲ್ಲಿ ₹ 100 ಕೋಟಿಯನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮಧ್ಯಂತರ ಠೇವಣಿ ಇಡಬೇಕು. ಪೂರ್ಣ ಮೊತ್ತವನ್ನು ಎರಡು ತಿಂಗಳ ಒಳಗೆ ಪಾವತಿಸಬೇಕು’ ಎಂದು ಅವರು ಕಂಪನಿಗೆ ಸೂಚಿಸಿದ್ದಾರೆ.

‘ಭಾರತದಲ್ಲಿ ನಿಗದಿಮಾಡಿರುವ ವಾಯುಮಾಲಿನ್ಯ ಮಾನದಂಡಗಳಿಗೆ ನಮ್ಮ ಎಲ್ಲಾ ಕಾರುಗಳು ಬದ್ಧವಾಗಿವೆ. ಈ ಆದೇಶವನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದು ಫೋಕ್ಸ್‌ವ್ಯಾಗನ್ ಕಂಪನಿ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !