ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ವಹಿವಾಟು ₹ 3.75 ಲಕ್ಷ ಕೋಟಿ ನಿರೀಕ್ಷೆ

ನವೆಂಬರ್‌ 4ರಿಂದ ಡಿಸೆಂಬರ್ 14ರ ನಡುವಿನ ಅವಧಿ
Last Updated 7 ನವೆಂಬರ್ 2022, 15:26 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್‌ 4ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು 32 ಲಕ್ಷ ಮದುವೆಗಳು ನಡೆಯುವ ಅಂದಾಜು ಇದೆ. ಇಷ್ಟು ಮದುವೆಗಳು ದೇಶದಲ್ಲಿ ಒಟ್ಟು ₹ 3.75 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಯುವುದಕ್ಕೆ ಕಾರಣವಾಗಲಿವೆ!

ವ್ಯಾಪಾರಿಗಳ ಸಂಘಟನೆಯಾಗಿರುವ ಅಖಿಲ ಭಾರತ ವರ್ತಕರ ಮಹಾಸಂಘ (ಸಿಎಐಟಿ) ಈ ಅಂದಾಜು ಸಿದ್ಧಪಡಿಸಿದೆ. ಮಹಾಸಂಘದ ಸಂಶೋಧನಾ ವಿಭಾಗವು ನಡೆಸಿದ ಅಧ್ಯಯನದ ಮೂಲಕ ಸಿಕ್ಕ ಅಂಕಿ–ಅಂಶಗಳ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ.

ಅಧ್ಯಯನದ ಭಾಗವಾಗಿ ದೇಶದ ಒಟ್ಟು 35 ನಗರಗಳಲ್ಲಿ 4,302 ವರ್ತಕರು ಹಾಗೂ ಸೇವಾದಾತರಿಂದ ಮಾಹಿತಿ ಪಡೆಯಲಾಗಿದೆ.

ನವೆಂಬರ್ 4ರಿಂದ ಡಿಸೆಂಬರ್ 14ರವರೆಗಿನ ಅವಧಿಯಲ್ಲಿ ದೆಹಲಿಯಲ್ಲಿಯೇ 3.5 ಲಕ್ಷ ಮದುವೆಗಳು ನಡೆಯಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ. ಇಷ್ಟು ಮದುವೆಗಳಿಂದ ಒಟ್ಟು ₹ 75 ಸಾವಿರ ಕೋಟಿ ಮೌಲ್ಯದ ವಹಿವಾಟು ಸಾಧ್ಯವಾಗಲಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ದೇಶದಲ್ಲಿ ಒಟ್ಟು 25 ಲಕ್ಷ ಮದುವೆಗಳು ನಡೆದಿದ್ದವು. ಇವುಗಳಿಂದಾಗಿ ಒಟ್ಟು ಅಂದಾಜು ₹ 3 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದ್ದವು.

ಮದುವೆ ನಿಮಿತ್ತ ನಡೆಯುವ ಖರೀದಿಗಳ ಕಾರಣದಿಂದಾಗಿ ಈ ಬಾರಿ ₹ 3.75 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಯುವ ನಿರೀಕ್ಷೆ ಇದೆ. ಮುಂದಿನ ಮದುವೆ ಋತು ಜನವರಿ 14ರಿಂದ ಜುಲೈವರೆಗೆ ಇರಲಿದೆ ಎಂದು ಖಂಡೇಲ್ವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT