ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಭೀತಿ ಸೃಷ್ಟಿಯಾಯಿತು. ಈ ಭೀತಿಯು ‘ಕರಡಿ ಕುಣಿತ’ಕ್ಕೆ ಅನುವು ಮಾಡಿಕೊಟ್ಟಿತು.

ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದ ಕಾರಣದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 1.7ರಷ್ಟು ಕುಸಿದವು. ಅಮೆರಿಕದ ಡಾಲರ್ ಎದುರು ರೂಪಾಯಿ ತೀವ್ರವಾಗಿ ಕುಸಿದಿದ್ದು, ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಗಳಿಂದ ಬಂಡವಾಳವನ್ನು ಮತ್ತಷ್ಟು ಹಿಂಪಡೆದಿದ್ದು ಕೂಡ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸಮರ ಸಾರಿದ ನಂತರದಲ್ಲಿ ಹೂಡಿಕೆದಾರರ ಸಂಪತ್ತಿನ ಮೊತ್ತವು ಒಟ್ಟು ₹22.40 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ಫೆಬ್ರುವರಿ 27ರ ನಂತರದಲ್ಲಿ ಸೆನ್ಸೆಕ್ಸ್ ಒಟ್ಟು 3,721 ಅಂಶದಷ್ಟು ಕುಸಿತ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಒಟ್ಟು 1,352 ಅಂಶ ಕುಸಿಯಿತು. ವಹಿವಾಟಿನಲ್ಲಿ ನಡುವಿನಲ್ಲಿ ಸೂಚ್ಯಂಕವು 2,494 ಅಂಶದವರೆಗೆ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 422 ಅಂಶ ಕುಸಿದಿದೆ. ವಹಿವಾಟಿನ ನಡುವಿನಲ್ಲಿ ಇದು 752 ಅಂಶದವರೆಗೆ ಕುಸಿದಿತ್ತು.

ಸೆನ್ಸೆಕ್ಸ್ನ ಭಾಗವಾಗಿರುವ ಷೇರುಗಳ ಪೈಕಿ ಅಲ್ಟ್ರಾಟೆಕ್ ಸಿಮೆಂಟ್ ಶೇ 5.23ರಷ್ಟು ಕುಸಿದಿದೆ. ಮಾರುತಿ ಸುಜುಕಿ, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್ಬಿಐ, ಇಂಟರ್ಗ್ಲೋಬ್ ಏವಿಯೇಷನ್, ಅದಾನಿ ಪೋರ್ಟ್ಸ್ ಕೂಡ ಕುಸಿದಿವೆ.

ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಇನ್ಫೊಸಿಸ್, ಟೆಕ್ ಮಹೀಂದ್ರ ಮತ್ತು ಎಚ್ಸಿಎಲ್ ಟೆಕ್ ಷೇರುಗಳು ಏರಿಕೆ ದಾಖಲಿಸಿವೆ.

‘ಪಶ್ಚಿಮ ಏಷ್ಯಾದಲ್ಲಿನ ಸಮರವು ತೀವ್ರಗೊಳ್ಳುತ್ತಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸೂಚ್ಯಂಕಗಳು ಕುಸಿದಿವೆ’ ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.

‘ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಕಡಿಮೆ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಯುದ್ಧವು ಎರಡನೆಯ ವಾರ ಪ್ರವೇಶಿಸಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಷೇರುಗಳ ಮಾರಾಟವು ತೀವ್ರವಾಗಿತ್ತು’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ಕರಡಿ’ ಹಿಡಿತದಲ್ಲಿ ಏಷ್ಯಾ ಮಾರುಕಟ್ಟೆಗಳು

ಯುದ್ಧದ ಪರಿಣಾಮವಾಗಿ ಏಷ್ಯಾದ ಇತರ ಪ್ರಮುಖ ಷೇರುಪೇಟೆಗಳಲ್ಲಿಯೂ ಭಾರಿ ಪ್ರಮಾಣದಲ್ಲಿ ಕುಸಿತ ಆಗಿದೆ. ದಕ್ಷಿಣ ಕೊರಿಯಾದ ಕೊಸ್ಪಿ ಶೇ 5.96ರಷ್ಟು, ಜಪಾನ್ನ ನಿಕೈ ಶೇ 5.20ರಷ್ಟು ಕುಸಿದಿವೆ. ಶಾಂಘೈ ಮತ್ತು ಹಾಂಗ್ಕಾಂಗ್ನ ಷೇರುಪೇಟೆಗಳೂ ನಕಾರಾತ್ಮಕ ವಹಿವಾಟು ಕಂಡಿವೆ.

ರೂಪಾಯಿ ಮೌಲ್ಯ ಕುಸಿತ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ 52 ಪೈಸೆಯಷ್ಟು ಕಡಿಮೆ ಆಗಿದೆ. ಕಚ್ಚಾ ತೈಲದ ಬೆಲೆ ಏರಿಕೆ, ಡಾಲರ್ ಬಲವರ್ಧನೆ ಮತ್ತು ಸಮರವು ಮೌಲ್ಯ ಇಳಿಕೆಗೆ ಕಾರಣವಾಗಿವೆ.

ಸಂಘರ್ಷದಿಂದ ಇದುವರೆಗೆ ₹22 ಲಕ್ಷ ಕೋಟಿ ನಷ್ಟ

ಫೆ.27ರ ನಂತರ 3,721 ಅಂಶ ಕುಸಿದ ಸೆನ್ಸೆಕ್ಸ್

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ದೇಶದ ಮಾರುಕಟ್ಟೆ ಭಾರಿ ಇಳಿಕೆ

ಬೆಳ್ಳಿ ದರ ಇಳಿಕೆ

ನವದೆಹಲಿ : ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ದರವು ಇಳಿಕೆಯಾಗಿದ್ದರೆ, ಚಿನ್ನದ ಧಾರಣೆ ಸ್ವಲ್ಪ ಏರಿಕೆಯಾಗಿದೆ.

ಕೆ.ಜಿ ಬೆಳ್ಳಿ ಧಾರಣೆ ₹3,400 ಇಳಿಕೆಯಾಗಿ, ₹2,68,300ರಂತೆ ಮಾರಾಟವಾಗಿದೆ. ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹200 ಏರಿಕೆಯಾಗಿ, ₹1,64,300 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.