ರಾಂಚಿ: 'ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅದರ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ದೇಶ ಸಜ್ಜಾಗಿರಬೇಕು' ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಬುಧವಾರ ಕರೆ ನೀಡಿದ್ದಾರೆ.

'ಆದರೂ ದೇಶದ ಪಾಲಿಗೆ ಈಗಿನ ಪರಿಸ್ಥಿತಿ ಆತಂಕಕಾರಿಯಾಗಿಲ್ಲ' ಎಂದು ತಿಳಿಸಿದ್ದಾರೆ.

ರಾಂಚಿಗೆ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, 'ಸಂಭಾವ್ಯ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸಲು ಪೂರ್ವಯೋಜಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಹೇಳಿದ್ದಾರೆ.

'ಈಗಿನ ಪರಿಸ್ಥಿತಿ ಕಳವಳಕಾರಿಯಾಗಿಲ್ಲ. ಆದರೆ ನಾವು ಜಾಗರೂಕರಾಗಿರಬೇಕು. ನಾಗರಿಕ ವಿಮಾನಯಾನ ಸೇರಿದಂತೆ ಪ್ರತಿಯೊಂದು ವಲಯವು ಪರಿಣಾಮವನ್ನು ಎದುರಿಸಲು ಸಜ್ಜಾಗಿರಬೇಕು. ಅಲ್ಪಾವಧಿ, ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಕಾರ್ಯತಂತ್ರಗಳನ್ನು ಸಿದ್ಧಪಡಿಸಬೇಕು' ಎಂದು ತಿಳಿಸಿದ್ದಾರೆ.

ಜಾಗತಿಕ ಅನಿಶ್ಚಿತತೆಯ ನಡುವೆ ವಿಮಾನಯಾನ ವೆಚ್ಚ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, 'ದೇಶೀಯ ಪ್ರಯಾಣಿಕರಿಗೆ ಯಾವುದೇ ಹೊರೆ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.

'ಇದರ ಭಾಗವಾಗಿ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಶುಲ್ಕ ಮತ್ತು ವಿಮಾನ ಇಂಧನದ (ಎಟಿಎಫ್) ಬೆಲೆ ಕಡಿಮೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

'ದೇಶೀಯ ಮಾರ್ಗಗಳಲ್ಲಿ ಪ್ರತಿದಿನ ಸುಮಾರು ಐದು ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ನಾವು ವಿಮಾನ ದರಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ. ಬೇಡಿಕೆಗೆ ತಕ್ಕಂತೆ ಸಂಪರ್ಕವನ್ನು ಹೆಚ್ಚಿಸುತ್ತೇವೆ' ಎಂದು ಹೇಳಿದ್ದಾರೆ.

'ಶೀಘ್ರದಲ್ಲೇ ₹29,000 ಕೋಟಿ ವೆಚ್ಚದ ಉಡಾನ್ 2 ಯೋಜನೆಯನ್ನು ಆರಂಭಿಸಲಾಗುವುದು. ಇದರ ಭಾಗವಾಗಿ ದೇಶವು 10 ವರ್ಷಗಳಲ್ಲಿ 100 ಹೊಸ ವಿಮಾನ ನಿಲ್ದಾಣ ಹಾಗೂ 200 ಹೆಲಿಪ್ಯಾಡ್ ಹೊಂದಲಿವೆ' ಎಂದು ತಿಳಿಸಿದ್ದಾರೆ.
.ಜೂನ್ 1ರಿಂದ ಬೀದರ್–ಬೆಂಗಳೂರು ಮಧ್ಯೆ ವಿಮಾನ ಸೇವೆ: ಸಚಿವ ಈಶ್ವರ ಖಂಡ್ರೆ.ಟೆಹರಾನ್ನಲ್ಲಿ ವಿಮಾನ ಹಾರಾಟ ಪುನರಾರಂಭ: ಅಮೆರಿಕ–ಇರಾನ್ ಸಂಘರ್ಷ ಅಂತ್ಯ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.