ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಅನೇಕ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದಲ್ಲಿ ಕಚ್ಚಾ ತೈಲಗಳು, ಸಿಎನ್ಜಿ ಸೇರಿದಂತೆ ಹಲವು ವಸ್ತುಗಳ ಕೊರತೆಯುಂಟಾಗಿದೆ. ಅವುಗಳ ಸಾಲಿಗೆ ಈಗ ಕಾಂಡೋಮ್ ಕೂಡ ಸೇರುತ್ತಿದೆ.

ಮಾರುಕಟ್ಟೆ ಅಂಕಿಅಂಶಗಳ ಪ್ರಕಾರ, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಕಾಂಡೋಮ್ ಉತ್ಪಾದನೆ ಇಳಿಮುಖವಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಕೊರತೆ ಎದುರಾಗಲಿದೆ.

ಕಾಂಡೋಮ್ಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾಗಿರುವುದು ಸಿಲಿಕೋನ್ ಆಯಿಲ್ ಮತ್ತು ಅನ್ಹೈಡ್ರಸ್ ಅಮೋನಿಯಾ. ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ನೈಸರ್ಗಿಕ ರಬ್ಬರ್ ಲ್ಯಾಟೆಕ್ಸ್ ಅನ್ನು ಸ್ಥಿರಗೊಳಿಸಲು ಅಮೋನಿಯಾವನ್ನು ಬಳಸಲಾಗುತ್ತದೆ, ಸಿಲಿಕೋನ್ ಆಯಿಲ್ ಉತ್ಪನ್ನದಲ್ಲಿ ಲೂಬ್ರಿಕೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿರುವ ಕಾಂಡೋಮ್ ಉತ್ಪಾದಕ ಕಂಪನಿಗಳು ವಾರ್ಷಿಕವಾಗಿ ₹8 ಸಾವಿರ ಕೋಟಿಯ 400 ಕೋಟಿಗೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತವೆ.

ಪ್ರಮುಖ ಕಂಪನಿಗಳಾದ ಹಿಲ್ ಲೈಫ್ಕೇರ್ ಲಿಮಿಟೆಡ್, ಮ್ಯಾನ್ಕೈಂಡ್ ಫಾರ್ಮಾ ಸೇರಿದಂತೆ ಹಲವು ಕಂಪನಿಗಳು ಕಚ್ಚಾ ವಸ್ತುಗಳ ಕೊರತೆಯನ್ನು ಎದುರಿಸುತ್ತಿವೆ. ಇದರ ಪರಿಣಾಮ ಕಾಂಡೋಮ್ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಿವೆ ವರದಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.