ಕಾರವಾರ: ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಯುದ್ಧ ಸಂಘರ್ಷದಿಂದ ಇಲ್ಲಿನ ವಾಣಿಜ್ಯ ಬಂದರಿಗೆ ಬಿಟುಮಿನ್ ಹೊತ್ತು ತರುತ್ತಿದ್ದ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬಂದರು ಆದಾಯದ ಮೇಲೆ ಪರಿಣಾಮ ಬೀರಿದೆ. ನೂರಾರು ಕಾರ್ಮಿಕರ ದುಡಿಮೆಗೆ ತೊಂದರೆ ಆಗಿದೆ.

ಬಂದರು ಸಮೀಪದಲ್ಲಿ ನಾಲ್ಕೈದು ಬಿಟುಮಿನ್ ಸಂಗ್ರಹಾಗಾರ ಕಂಪನಿಗಳಿವೆ. ಅವು ಇರಾಕ್, ಇರಾನ್ ದೇಶಗಳಿಂದ ಸಾವಿರಾರು ಟನ್ ಬಿಟುಮಿನ್ ಆಮದು ಮಾಡಿಕೊಳ್ಳುತ್ತವೆ. ಇಲ್ಲಿಂದ ಟ್ಯಾಂಕರ್ಗಳ ಮೂಲಕ ಉತ್ತರ ಕರ್ನಾಟಕ, ಚೆನ್ನೈ, ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧೆಡೆ ಪೂರೈಸಲಾಗುತ್ತದೆ.

ಎರಡು ವಾರಗಳಿಂದ ಬಿಟುಮಿನ್ ಪೂರೈಸುವ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಹಡಗುಗಳು ಬಾರದ ಕಾರಣ ವಾಣಿಜ್ಯ ಬಂದರಿನಲ್ಲಿ ಚಟುವಟಿಕೆ ಸ್ಥಗಿತಗೊಂಡಿದೆ. ನಿತ್ಯವೂ ಇಲ್ಲಿಂದ ಬಿಟುಮಿನ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್ಗಳು ಕೆಲಸ ಸಿಗದೆ ಬಂದರಿನ ಹೊರವಲಯದಲ್ಲಿ ಖಾಲಿ ನಿಂತಿವೆ.

‘ವಾಣಿಜ್ಯ ಬಂದರಿಗೆ ವಿದೇಶಗಳಿಂದ ರಾಕ್ ಫಾಸ್ಫೇಟ್, ಹೈ ಸ್ಪೀಡ್ ಡೀಸೆಲ್ ಆಮದು ಆಗುತ್ತವೆ. ಆದರೆ, ಅವೆಲ್ಲವುಗಳಿಗಿಂತ ಬಿಟುಮಿನ್ ಆಮದು ಚಟುವಟಿಕೆಯಿಂದಲೇ ಹೆಚ್ಚು ಆದಾಯ ಸಂಗ್ರಹವಾಗುತ್ತದೆ. ವಾರ್ಷಿಕ 100 ಕಾರ್ಗೊ ಹಡಗುಗಳು ಬಿಟುಮಿನ್ನ್ನು ಹೊತ್ತು ತರುತ್ತವೆ. ವಾರಕ್ಕೆ ಕನಿಷ್ಠ ನಾಲ್ಕರಿಂದ ಐದು ಹಡಗುಗಳು ಬರಬೇಕಿತ್ತು. ಯುದ್ಧದ ಪರಿಣಾಮ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ’ ಎಂದು ಬಂದರು ಅಧಿಕಾರಿ ನಿತೇಶ ಸಾರಂಗ ತಿಳಿಸಿದರು.

‘ಡಾಂಬರು ಉತ್ಪಾದನೆ, ಪೇಂಟ್ ತಯಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಬಿಟುಮಿನ್ ಕಚ್ಚಾವಸ್ತುವಾಗಿ ಪೂರೈಕೆಯಾಗುತ್ತದೆ. ಕಂಪನಿಗಳ ಬೇಡಿಕೆ ಹೆಚ್ಚಿದ್ದರೂ ಅದಕ್ಕೆ ತಕ್ಕಷ್ಟು ಪೂರೈಕೆ ಮಾಡಲಾಗುತ್ತಿಲ್ಲ. ಬಿಟುಮಿನ್ ಪೂರೈಕೆ ಸದ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಯಾವಾಗ ಹಡಗುಗಳು ಬರಲಿವೆ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಆಮದು ವಹಿವಾಟು ನಡೆಸುವ ಕಂಪನಿ ಅಧಿಕಾರಿಯೊಬ್ಬರು ತಿಳಿಸಿದರು.

ಅರಬ್ ರಾಷ್ಟ್ರಗಳಿಂದ ಬಿಟುಮಿನ್ ಬರಬೇಕಿದ್ದು ಅಲ್ಲಿಂದ ಪೂರೈಕೆ ನಿಂತಿದೆ. ಇದರಿಂದ ಬಂದರಿಗೆ ಶುಲ್ಕದ ಮೂಲಕ ಸಂಗ್ರಹವಾಗುತ್ತಿದ್ದ ಕನಿಷ್ಠ ₹60 ಲಕ್ಷದಿಂದ 70 ಲಕ್ಷ ಆದಾಯ ತಪ್ಪಿದೆ
ಟಿ.ಎಸ್.ರಾಠೋಡ್, ನಿರ್ದೇಶಕ ಬಂದರು ಜಲಸಾರಿಗೆ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.