ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಫೆಬ್ರುವರಿ ತಿಂಗಳಿನಲ್ಲಿ ಶೇ 2.13ರಷ್ಟು ದಾಖಲಾಗಿದೆ. ಇದು 11 ತಿಂಗಳ ಗರಿಷ್ಠ ಮಟ್ಟವಾಗಿದೆ.

ತರಕಾರಿಗಳ ಬೆಲೆಯಲ್ಲಿ ಇಳಿಕೆ ಆಗಿದ್ದರೂ, ಆಹಾರ ಮತ್ತು ಆಹಾರೇತರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ. ಇದು ಸಗಟು ಹಣದುಬ್ಬರ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಸಗಟು ಹಣದುಬ್ಬರವು ಪ್ರಸಕ್ತ ವರ್ಷದ ಜನವರಿಯಲ್ಲಿ ಶೇ 1.81ರಷ್ಟು ದಾಖಲಾಗಿದ್ದರೆ, 2025ರ ಫೆಬ್ರುವರಿಯಲ್ಲಿ ಶೇ 2.45ರಷ್ಟಿತ್ತು.

ತಯಾರಿಕಾ ವಲಯದ ವಸ್ತುಗಳು, ಆಹಾರ ಮತ್ತು ಆಹಾರೇತರ ವಸ್ತುಗಳು, ಜವಳಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇವು ಸಗಟು ಹಣದುಬ್ಬರ ಏರಿಕೆಗೆ ಕಾರಣ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಜನವರಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ 1.55ರಷ್ಟಿತ್ತು. ಇದು ಫೆಬ್ರುವರಿಯಲ್ಲಿ ಶೇ 2.19ಕ್ಕೆ ಹೆಚ್ಚಳವಾಗಿದೆ. ತಯಾರಿಕಾ ವಲಯದ ಉತ್ಪನ್ನಗಳ ಬೆಲೆಯು ಶೇ 2.86ರಿಂದ ಶೇ 2.92ಕ್ಕೆ ಏರಿಕೆಯಾಗಿದ್ದರೆ, ಆಹಾರೇತರ ಪದಾರ್ಥಗಳ ದರವು ಶೇ 7.58ರಿಂದ ಶೇ 8.80ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ದ್ವಿದಳ ಧಾನ್ಯಗಳು, ಆಲೂಗೆಡ್ಡೆ, ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ, ತರಕಾರಿಗಳ ಬೆಲೆಯು ಶೇ 6.78ರಿಂದ ಶೇ 4.73ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಬೆಲೆಯು ಶೇ 4.01ರಿಂದ ಶೇ 3.78ಕ್ಕೆ ಕಡಿಮೆ ಆಗಿದೆ ಎಂದು ತಿಳಿಸಿದೆ.

ಕಚ್ಚಾ ತೈಲದ ಬೆಲೆಯು ನಿರಂತರವಾಗಿ ಏರಿಕೆಯಾದರೆ, ಸಗಟು ಹಣದುಬ್ಬರವು ಇನ್ನಷ್ಟು ಹೆಚ್ಚಳವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.